ರಾಷ್ಟ್ರೀಯ

ನೋಟು ರದ್ದತಿ ನಂತರ 546 ಮಾವೋವಾದಿಗಳು ಶರಣಾಗತಿ

Pinterest LinkedIn Tumblr

naxalನವದೆಹಲಿ: ಕಪ್ಪು ಹಣವನ್ನು ನಿರ್ಮೂಲನ ಮಾಡುವುದಕ್ಕಾಗಿ ಕೇಂದ್ರ ಸರ್ಕಾರ ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ನಿರ್ಧಾರ ಮಾವೋವಾದಿ ಸಂಘಟನೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನೋಟು ರದ್ದು ನಿರ್ಧಾರ ಮಾಡಿದ ನಂತರ ಕಳೆದ 28 ದಿನಗಳಲ್ಲಿ 546 ಮಾವೋವಾದಿಗಳು ಮತ್ತು ಮಾವೋವಾದದ ಬಗ್ಗೆ ಸಹಾನುಭೂತಿ ಹೊಂದಿರುವವರು ಶರಣಾಗಿದ್ದಾರೆ.

ಸಿಆರ್‍‍ಪಿಎಫ್ ಮತ್ತು ಚಂಡೀಗಢ, ಒಡಿಶಾ, ಆಂಧ್ರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಪೊಲೀಸ್ ಪಡೆ ನಡೆಸಿದ ದಾಳಿಗಳಲ್ಲಿ ಈ ಮಾವೋವಾದಿಗಳು ಶರಣಾಗಿದ್ದರು. ನವೆಂಬರ್ 8 ರಂದು ನೋಟು ರದ್ದತಿ ತೀರ್ಮಾನ ಪ್ರಕಟವಾದ ನಂತರ 469 ಮಾವೋವಾದಿಗಳು ಶರಣಾಗಿದ್ದಾರೆ ಎಂದು ಬಲ್ಲಮೂಲಗಳು ಹೇಳಿವೆ.

ಹೀಗೆ ಶರಣಾದ ಮಾವೋವಾದಿಗಳಲ್ಲಿ ಶೇ .70 ಮಂದಿ ಒಡಿಶಾದವರಾಗಿದ್ದಾರೆ.ಆಂಧ್ರ ಪ್ರದೇಶದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ 28 ಮಂದಿ ಹತ್ಯೆಯಾಗಿದ್ದಾರೆ.

ಕಳೆದ 6 ವರ್ಷಗಳಲ್ಲಿ ಅತೀ ಹೆಚ್ಚು ಮಾವೋವಾದಿಗಳು ಹತ್ಯೆಯಾಗಿದ್ದು 2016ರಲ್ಲೇ ಆಗಿದೆ.

ಅಧಿಕೃತ ಮಾಹಿತಿಗಳ ಪ್ರಕಾರ 2011ರಿಂದ 2016 ನವೆಂಬರ್ 15 ರ ವರೆಗೆ 3,7666 ಮಾವೋವಾದಿಗಳು ಸೆರೆಯಾಗಿದ್ದಾರೆ. ಇದರಲ್ಲಿ 1,399 ಮಂದಿ 2016ರಲ್ಲಿ ಬಂಧಿಯಾದವರಾಗಿದ್ದಾರೆ.

₹1000 ಮತ್ತು ₹500 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ತೀರ್ಮಾನದಿಂದಾಗಿ ಮಾವೋವಾದಿಗಳ ಆರ್ಥಿಕ ಮೂಲಕ್ಕೆ ಹೊಡೆತ ಬಿದ್ದಿತ್ತು. ಈ ಕಾರಣದಿಂದಾಗಿ ಇವರಿಗೆ ಶಸ್ತ್ರಾಸ್ತ್ರ, ಔಷಧಿ ಮತ್ತು ನಿತ್ಯೋಪಯೋಗಿ ವಸ್ತುಗಳನ್ನು ಖರೀದಿಸಲು ಹಣವಿಲ್ಲದಾಯ್ತು. ಹಾಗಾಗಿ ಇವರು ಶರಣಾಗಬೇಕಾಯಿತು.

ಅದೇ ವೇಳೆ ಮಾವೋವಾದಿಗಳ ಶಕ್ತಿಕೇಂದ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದು ಕೂಡಾ ಇವರಿಗೆ ಹೊಡೆತ ನೀಡಿದೆ ಎಂದು ಸಿಆರ್‍‍‌‍ಪಿಎಫ್ ಹೇಳಿದೆ.

ಮಾವೋವಾದಿಗಳು ತಮ್ಮಲ್ಲಿರುವ ಹಳೆಯ ನೋಟುಗಳನ್ನು ಸ್ಥಳೀಯ ಗುತ್ತಿಗೆದಾರರ ಕೈಯಲ್ಲಿ ನೀಡಿಯೋ, ಉದ್ಯಮಿಗಳ ಕೈಯಲ್ಲಿ ನೀಡಿಯೋ ನೋಟು ಬದಲಿಸಲು ಯತ್ನಿಸುತ್ತಾರೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕಳೆದ ಶುಕ್ರವಾರ ಹೇಳಿದ್ದರು.

Comments are closed.