ರಾಷ್ಟ್ರೀಯ

ನೋಟು ನಿಷೇಧವನ್ನು ತೀವ್ರವಾಗಿ ವಿರೋಧಿಸಿರುವ ಅರುಣ್ ಶೌರಿ ಹೇಳಿದ್ದೇನು…?

Pinterest LinkedIn Tumblr

arun_shourie

ನವದೆಹಲಿ: 500-1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಮಾಜಿ ಕೇಂದ್ರ ಸಚಿವ ಅರುಣ್ ಶೌರಿ ತೀವ್ರವಾಗಿ ವಿರೋಧಿಸಿದ್ದಾರೆ.

ನೋಟುಗಳ ನಿಷೇಧದ ಉದ್ದೇಶ ಒಳ್ಳೆಯದಿರಬಹುದು ಆದರೆ ಸರಿಯಾಗಿ ಯೋಜಿಸಿಲ್ಲ ಎಂದು ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಶೌರಿ ಆರೋಪಿಸಿದ್ದು, ಬಾವಿಗೆ ಬೀಳುವುದೂ ದಿಟ್ಟ ನಿರ್ಧಾರ. ಆತ್ಮಹತ್ಯೆ ಮಾಡಿಕೊಳ್ಳುವುದೂ ದಿಟ್ಟ ನಿರ್ಧಾರವೇ ಎಂದು ಪ್ರಶ್ನಿಸಿದ್ದಾರೆ.

ನೋಟುಗಳ ನಿಷೇಧ ಮಾಡುವುದರಿಂದ ಕಪ್ಪು ಹಣ ನಿಗ್ರಹಿಸಬಹುದು ಎಂದು ಸರ್ಕಾರ ತಪ್ಪು ಕಲ್ಪನೆ ಹೊಂದಿದೆ. ಸರ್ಕಾರ ಏನಾದರೂ ಮಾಡಬೇಕೆಂದಿದ್ದರೆ ಮೊದಲು ತೆರಿಗೆ ಆಡಳಿತದ ವಿಚಾರದಲ್ಲಿ ಸುಧಾರಣೆ ತಂದು ನಂತರ ಮಾಡಬಹುದಾಗಿತ್ತು ಎಂದು ಶೌರಿ ಹೇಳಿದ್ದಾರೆ.

ಕಪ್ಪುಹಣವನ್ನು ಜನರು ಕ್ಯಾಷ್ ರೂಪದಲ್ಲಿ ಇಟ್ಟುಕೊಳ್ಳುವುದಿಲ್ಲ. ವಿದೇಶದಲ್ಲಿ ಕಪ್ಪುಹಣವನ್ನು ಇಟ್ಟಿರುತ್ತಾರೆ. ಅದು ಡಾಲರ್ ನೋಟ್ ನಲ್ಲೋ ಅಥವಾ ಗನ್ನಿಬ್ಯಾಗ್ ಗಳಲ್ಲೋ ಎಂಬುದು ತಿಳಿದಿರಲಿ. ಆಸ್ತಿ, ಆಭರಣ ಸ್ಟಾಕ್ ಮಾರ್ಕೆಟ್ ಅಥವಾ ಬೇರೆ ಇನ್ಯಾವುದೋ ರೂಪದಲ್ಲಿ ಕಪ್ಪುಹಣ ವಿದೇಶಗಳಲ್ಲಿ ಅಡಗಿಕೊಂಡಿರುತ್ತದೆ ಎಂದರು.

Comments are closed.