ಕರಾವಳಿ

ಭೂಮಿ ಮತ್ತು ನಿವೇಶನಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ : ನೂರಾರು ಮಂದಿಯ ಬಂಧನ

Pinterest LinkedIn Tumblr

dcoffc_jail_bharo_2

ಮಂಗಳೂರು, ನ.18: ಭೂಮಿ ಮತ್ತು ನಿವೇಶನಕ್ಕಾಗಿ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಮಂಗಳೂರಿನಲ್ಲೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ 14 ಸಾಮೂಹಿಕ ಸಂಘಟನೆಗಳ ಸಂಯುಕ್ತ ಅಶ್ರಯದಲ್ಲಿ ಭೂಮಿ ಮತ್ತು ನಿವೇಶನಕ್ಕಾಗಿ ಆಗ್ರಹಿಸಿ ಇಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಮತ್ತು ಜೈಲು ಭರೋ ಚಳವಳಿ ನಡೆಯಿತು.

dcoffc_jail_bharo_1 dcoffc_jail_bharo_3 dcoffc_jail_bharo_4 dcoffc_jail_bharo_5 dcoffc_jail_bharo_6 dcoffc_jail_bharo_7 dcoffc_jail_bharo_8 dcoffc_jail_bharo_9 dcoffc_jail_bharo_10

ರಾಜ್ಯದ ಎಲ್ಲಾ ಬಡವರಿಗೆ ಹಿತ್ತಲು ಸಹಿತ ವಸತಿ ಒದಗಿಸಬೇಕು, ಭೂಹೀನ, ದಲಿತ, ಆದಿವಾಸಿ ಇತರ ಬಡವರಿಗೆ ತಲಾ 5 ಎಕರೆ ಜಮೀನು ಕೊಡಬೇಕು, ಸರಕಾರಿ ಜಮೀನು ಸಾಗುವಳಿಗೆ ಹಕ್ಕುಪತ್ರ ನೀಡಲು ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತರಬೇಕು ಬಡ ಗೇಣಿದಾರರ ರಕ್ಷಣೆಗೆ ಕ್ರಮ ವಹಿಸಬೇಕು, ಅರಣ್ಯ ಭೂಮಿ ಹಕ್ಕು ಪತ್ರಕ್ಕಾಗಿ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ ತಿದ್ದುಪಡಿ ತರಬೇಕು, ಗುತ್ತಿಗೆ ಮತ್ತು ಕಂಪೆನಿ ಕೃಷಿ ಬೇಡವೇ ಬೇಡ, ಬಲವಂತದ ಭೂ ಸ್ವಾಧೀನ ಬೇಡವೇ ಬೇಡ ಎಂಬ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದ.ಕ. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ನೂರಾರು ಧರಣಿ ನಿರತರನ್ನು ತಡೆದ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ತೆಗೆದುಕೊಂಡರು.

Comments are closed.