
ದೆಹಲಿ: ಢಾಕಾ ದಾಳಿನ್ನು ಖಂಡಿಸಿದ ಬಾಂಗ್ಲಾದ ಪ್ರಸಿದ್ದ ಬರಹಗಾರ್ತಿ ತಸ್ಲೀಮಾ ನಸ್ರೀನ್ ಇಸ್ಲಾಂ ಒಂದು ಶಾಂತಿ ಪ್ರಿಯ ಧರ್ಮವಲ್ಲ ಎಂದು ಹೇಳಿದ್ದಾರೆ.
ತಮ್ಮ ಖಾರದ ಮಾತಿನಿಂದಲೇ ಬಾಂಗ್ಲಾದ ಪ್ರಧಾನಿ ಸೇಖ್ ಹಸೀನಾರನ್ನು ತರಾಟೆಗೆ ತೆಗೆದುಕೊಂಡ ತಸ್ಲೀನಾ ನಸ್ರಿನ್, ಡಾಕಾ ದಾಳಿಯ ಸಂತ್ರಸ್ಥರಿಗೆ ಸಂತಾಪ ವ್ಯಕ್ತ ಪಡಿಸಿರುವ ನೀವು ಇಸಿಸ್ ಉಗ್ರರು ಬಾಂಗ್ಲಾದಲ್ಲಿ ಬುದ್ದಿ ಜೀವಿಗಳು ಹಾಗೂ ಹಿಂದುಗಳನ್ನು ಕೊಲೆ ಮಾಡುವಾಗ ಮೌನ ತಾಳಲು ಕಾರಣವೇನು? ಎಂದು ಪ್ರಶ್ನಿಸಿದ್ದಾರೆ.
ಬಾಂಗ್ಲಾದೇಶ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚಿನ ಭಯೋತ್ಪಾದಕರ ಉಗಮಕ್ಕೆ ಕಾರಣವಾಗಿದೆ, ಬಾಂಗ್ಲಾ ದೇಶಿಗರು ಸುಮಾರು 36 ದೇಶಗಳ ಉಗ್ರಗಾಮಿ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನುಮುಂದೆಯದರೂ ಇಸ್ಲಾಂ ಒಂದು ಶಾಂತಿ ಪಾಲಾನಾ ಧರ್ಮ ಎಂದು ಭೋದಿಸುವುದನ್ನು ನಿಲ್ಲಿಸಿ ಎಂದು ನಸ್ರೀನ್ ಟ್ವೀಟ್ ಮಾಡಿದ್ದಾರೆ.
ಢಾಕಾದಲ್ಲಿ 20ಜನರ ಸಾವಿಗೆ ಕಾರಣರಾದ ಆರು ಉಗ್ರರು ಶ್ರೀಮಂತ ಕುಟುಂಬದಿಂದ ಬಂದವರಾಗಿದ್ದಾರೆ, ಉಗ್ರಗಾಮಿಗಳಾಗಲು ನೀವು ಅವಿಜ್ಞಾವಂತರೋ ಅಥವ ಬಡತನದ ಹಿನ್ನೆಲೆ ಬೇಕಿಲ್ಲ, ಕೇವಲ ಇಸ್ಲಾಂ ಅನ್ನು ಪ್ರೀತಿಸಿದರೆ ಸಾಕು ಎಂದು ಹೇಳಿದ್ದಾರೆ.
ಬಾಂಗ್ಲಾ ಮೂಲದ ತಸ್ಲೀಮಾ ನಸ್ರೀನ್ ತಮ್ಮ ಇಸ್ಲಾಂ ವಿರುದ್ದ ಹೋರಾಟ ಮನೋಭಾವದಿಂದಲೇ ಖ್ಯಾತರಾಗಿದ್ದು 1994ರಿಂದಲೇ ಬಾಂಗ್ಲಾ ಬಿಟ್ಟು ಬೇರೆ ದೇಶದಲ್ಲಿ ನೆಲೆಸಿದ್ದಾರೆ
Comments are closed.