ಢಾಕಾ: ಇತ್ತೀಚೆಗೆ ಬಾಂಗ್ಲಾದ ರಾಜಧಾನಿ ಢಾಕಾದಲ್ಲಿ ದಾಳಿ ನಡೆಸಿದ ಏಳು ಜನ ಉಗ್ರರಲ್ಲಿ ಒಬ್ಬ ಆಡಳಿತ ಪಕ್ಷ ಆವಾಮಿ ಲೀಗ್ ಹಿರಿಯ ನಾಯಕನ ಪತ್ರ ಎನ್ನಲಾಗಿದೆ.
ಘಟನೆಯ ಬಗ್ಗೆ ಪೊಲಿಸರು ನಡೆಸಿದ ಕಾರ್ಯಾರಣೆಯಲ್ಲಿ ಹತ್ಯೆಯಾದ ಉಗ್ರರ ಪೈಕಿ ಮೂವರ ಫೋಟೊ ಬಿಡುಗಡೆ ಮಾಡಿದ್ದು, ಈ ಪೈಕಿ ಒಬ್ಬ ಬಾಂಗ್ಲಾದೇಶ ಒಲಿಂಪಿಕ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಅಮಾಮಿ ಲೀಗ್ ಪಕ್ಷದ ಢಾಕಾ ನಗರ ಶಾಖೆಯ ಮುಖ್ಯಸ್ಥ ಎಸ್.ಎಂ. ಇಂತಿಯಾಜ್ ಖಾನ್ ಬಾಬುಲ್ ಪುತ್ರ ರೋಹನ್ ಇಬ್ಲೆ ಇಂತಿಯಾಜ್ ಎಂಬುವುದಾಗಿ ಆವಾಮಿ ಲೀಗ್‌ನ ನಾಯಕರೊಬ್ಬರು ಗುರುತಿಸಿದ್ದಾರೆ.
ಜನವರಿ 4ರಂದು ಬಾಬುಲ್ ತಮ್ಮ ಮಗ ಕಾಣೆಯಾಗಿದ್ದಾನೆಂದು ಪ್ರಕರಣ ದಾಖಲಿಸಿದ್ದರು. ಆದರೆ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಪತ್ನಿಯ ಚಿಕಿತ್ಸೆಗೆಂದು ಆತ ಭಾರತಕ್ಕೆ ಬಂದಿದ್ದ. ಬಳಿಕ ಮನೆಗೆ ಹಿಂತಿರುಗಿರಲಿಲ್ಲ. ಇದೀಗ ಆತ ಉಗ್ರ ಸಂಘಟನೆಗೆ ಸೇರಿದ್ದು ಈಗ ಬಯಲಾಗಿದೆ.
Comments are closed.