ನವದೆಹಲಿ: ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಐಪಿಎಲ್ ಪಂದ್ಯವೊಂದರಲ್ಲಿ ಎಸ್. ಶ್ರೀಶಾಂತ್ಗೆ ಕಪಾಳಮೋಕ್ಷ ಮಾಡಿದ ಬಳಿಕ ಭಾರೀ ವಿವಾದಕ್ಕೆ ಗುರಿಯಾಗಿದ್ದರು. ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ನಡುವೆ ಪಂದ್ಯವೊಂದರಲ್ಲಿ ಈ ಘಟನೆ ನಡೆದಿತ್ತು.
ಆಪ್ ಕಿ ಅದಾಲತ್ ಶೋನಲ್ಲಿ ಇಂಡಿಯಾ ಟಿವಿಗೆ ಮಾತನಾಡುತ್ತಿದ್ದ ಭಜ್ಜಿ ಈ ಘಟನೆಯ ಬಗ್ಗೆ ತಮಗೆ ವಿಷಾದವೆನಿಸಿದ್ದು, ಹಾಗೆ ಮಾಡಬಾರದಿತ್ತು ಎಂದಿದ್ದಾರೆ.
ನಾನು ಜೀವನದಲ್ಲಿ ಅನೇಕ ತಪ್ಪುಗಳನ್ನು ಮಾಡಿದ್ದು ಅದರಿಂದ ಪಾಠ ಕಲಿತಿದ್ದೇನೆ. ಶ್ರೀಶಾಂತ್ಗೆ ನಾನು ಕಪಾಳಮೋಕ್ಷ ಮಾಡಿದ ಘಟನೆ ಕೂಡ ಅವುಗಳಲ್ಲಿ ಒಂದಾಗಿದೆ. ಆದರೆ ನಾನು ಜೋರಾಗಿ ಕೆನ್ನೆಗೆ ಬಾರಿಸಿದ ರೀತಿಯಲ್ಲಿ ಅವನು ಅಳುವುದಕ್ಕೆ ಆರಂಭಿಸಿದ. ಆದರೆ ನಾನು ಅಷ್ಟೊಂದು ಜೋರಾಗಿ ಬಾರಿಸಿರಲಿಲ್ಲ. ಆ ಘಟನೆಯೊಂದರಲ್ಲಿ ಮಾತ್ರ ಪ್ರತಿಯೊಬ್ಬರೂ ನಾನು ತಪ್ಪುಮಾಡಿದ್ದೇನೆಂದು ಹೇಳಿದರು. ಅದಕ್ಕಾಗಿ ನಾನು ಪುನಃ ಕ್ಷಮಾಪಣೆ ಕೇಳಿದ್ದು, ನಾನು ಹಾಗೆ ಮಾಡಬಾರದಿತ್ತು ಎಂದು ಹರ್ಭಜನ್ ಹೇಳಿದ್ದಾರೆ.
Comments are closed.