ಅಂತರಾಷ್ಟ್ರೀಯ

ಪುಟ್ಟ ಬಾಲಕನನ್ನು ಹಿಡಿಯಲು ಕ್ರಿಕೆಟ್ ಆಟಗಾರರು ಓಡುತ್ತಿರುದು ಯಾಕೆ ಗೊತ್ತಾ….? ಮುಂದೆ ಓದಿ

Pinterest LinkedIn Tumblr

afagan

ಕಾಬುಲ್: ಕ್ರಿಕೆಟ್ ಆಟಗಾರರು ಅವರ ಹಿಂದೆ ಅಭಿಮಾನಿಗಳಿಂದ ಹೆಚ್ಚು ಸಂತೋಷಗೋಳ್ತಾರೆ. ಆದ್ರೆ ಕೆಲವೊಮ್ಮೆ ಅಭಿಮಾನಿಗಳ ಹಿಂದೆಯೂ ಕ್ರಿಕೆಟರ್‍ಗಳು ಓಡಬೇಕಾಗುತ್ತೆ ಎನ್ನುವುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.

ಹೌದು. ಅಫ್ಘಾನಿಸ್ತಾನದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಚಿಕ್ಕಬಾಲಕನನ್ನ ಹಿಡಿಯಲು ಕ್ರಿಕೆಟ್ ಆಟಗಾರರಿಬ್ಬರು ಸಿಕ್ಕಾಪಟ್ಟೆ ಓಡಿದ್ದಾರೆ. ಪೋಲಿಯೋ ಡ್ರಾಪ್ ಹಾಕಿಸಿಕೊಳ್ಳದೇ ಓಡುತ್ತಿದ್ದ ಬಾಲಕನನ್ನ ಹಿಡಿಯಲು ಹೀಗೆ ಆಫ್ಘಾನಿಸ್ತಾನದ ಆಟಗಾರರು ಹರಸಾಹಸ ಪಟ್ಟಿದ್ದಾರೆ.

ಪೋಲಿಯೋ ಲಸಿಕೆ ತುಂಬಾನೆ ಮಹತ್ವಪೂರ್ಣವಾಗಿದ್ದು, ಇದನ್ನು ಅರಿತಿರುವ ಕ್ರಿಕೆಟರ್‍ಗಳು ಬಾಲಕನಿಗೆ ಲಸಿಕೆ ಹಾಕಿಸಲೇಬೇಕೆಂದು ಆತನನ್ನ ಹಿಡಿಯಲು ಓಡಿದ್ದಾರೆ. ಆಟಗಾರರು ಓಡುತ್ತಿರುವ ಫೋಟೋವೊಂದನ್ನ ಸ್ಥಳೀಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಕ್ರಿಕೆಟಿಗರ ಕಾಳಜಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments are closed.