ಅಂತರಾಷ್ಟ್ರೀಯ

ಚೀನಾ ಮತ್ತೊಂದು ಅತ್ಯಾದ್ಭುತ ಸಾಧನೆ ವಿಸ್ಮಯಕಾರಿ ಗಾಜಿನ ಸೇತುವೆ

Pinterest LinkedIn Tumblr

class_bridg_china

ಬೀಜಿಂಗ್ ಜೂ.28 : ಸಾಮಾನ್ಯವಾಗಿ ನಾವು ಸೇತುವೆಗಳನ್ನು ಸಿಮೆಂಟ್, ಕಲ್ಲುಗಳನ್ನು ಬಳಸಿ ಗಟ್ಟಿಮುಟ್ಟಾಗಿ ಕಟ್ಟುವುದನ್ನು ನೋಡಿದ್ದೇವೆ. ಆದರೆ ಚೀನಾದಲ್ಲಿ ಗಾಜಿನಿಂದ ಸೇತುವೆಯನ್ನು ನಿರ್ಮಿಸಿ ಚೀನಾ ಮತ್ತೊಂದು ಅತ್ಯದ್ಭುತ ಸಾಧನೆಗೆ ನಾಂದಿ ಹಾಡಿದೆ.

ಚೀನಾದ ಹ್ಯೂನನ್ ಪ್ರಾಂತ್ಯದಲ್ಲಿ ಕಟ್ಟಲಾಗಿರುವ ಈ ಸೇತುವೆ ಮೇಲೆ ವಾಹನಗಳು ಓಡಾಡಬಹುದು. ಅಲ್ಲದೇ ಇದು ವಿಶ್ವದ ಅತಿ ಉದ್ದದ, ಎತ್ತರದ ಗಾಜಿನ ಸೇತುವೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಝಂಗ್ಜಿಯಾಜಿಯಲ್ಲಿ ನಿರ್ಮಿಸಿರುವ 430 ಮೀಟರ್ ಉದ್ದದ ಈ ಸೇತುವೆಯನ್ನ ಗಟ್ಟಿಮುಟ್ಟಾದ ಎರಡು ಕೊಂಡಿಗಳಲ್ಲಿ ಬಿಗಿಯಲಾಗಿದ್ದು, ನೆಲದಿಂದ 900 ಅಡಿ ಎತ್ತರದಲ್ಲಿ ಈ ಸೇತುವೆಯನ್ನ ನಿರ್ಮಿಸಲಾಗಿದೆ.

ಇನ್ನು ಈ ಸೇತುವೆ ಮೇಲೆ ನಡೆಸಿದ ಸುರಕ್ಷತಾ ಪರೀಕ್ಷೆ ಕೂಡ ಯಶಸ್ವಿಯಾಗಿದೆ. 11 ಸ್ವಯಂ ಸೇವಕರನ್ನೊಳಗೊಂಡ ಮಿಲಿಟರಿ ವಾಹನ, ಸೇತುವೆ ಮೇಲೆ ಸಂಚರಿಸುವ ಮೊದಲು 20 ಸ್ವಯಂಸೇವಕರು ಸುತ್ತಿಗೆಗಳಿಂದ ಒಡೆಯುವ ಮೂಲಕ ಗಾಜುಗಳನ್ನು ಪರಿಶೀಲಿಸಿದರು. 10 ಸ್ವಯಂ ಸೇವಕರನ್ನೊಳಗೊಂಡ ಇನ್ನೊಂದು ತಂಡ ಮತ್ತೊಮ್ಮೆ ಗಾಜನ್ನು ಒಡೆಯಲು ಪ್ರಯತ್ನಿಸಿದರೂ ಅದು ಒಡೆಯಲಿಲ್ಲ.

ಇನ್ನು ಈ ಸೇತುವೆ ನಿರ್ಮಾಣಕ್ಕೆ 99 ಗಾಜಿನ ತುಂಡುಗಳನ್ನು ಬಳಸಲಾಗಿತ್ತು ಒಂದೊಂದು ತುಂಡೂ 4.5 ಮೀಟರ್ ಉದ್ದ, ಮತ್ತು 15 ಮಿಲಿ ಮೀಟರ್ ದಪ್ಪವಿದೆ.

Comments are closed.