ರಾಷ್ಟ್ರೀಯ

ನನ್ನನ್ನು ಗಲ್ಲಿಗೇರಿಸಿದರೂ ಜಮ್ಮು ಕಾಶ್ಮಿರ ಭಾರತದ ಭಾಗವಲ್ಲವೆಂದು ಹೇಳುತ್ತೇನೆ: ರಷೀದ್

Pinterest LinkedIn Tumblr

jsಕಾಶ್ಮಿರ್,: ಒಂದು ವೇಳೆ ನನ್ನನ್ನು ಗಲ್ಲಿಗೇರಿಸಿದರೂ ಜಮ್ಮು ಕಾಶ್ಮಿರ ಭಾರತದ ಭಾಗವಾಗಿಲ್ಲ ಎಂದು ಹೇಳುವುದಾಗಿ ಜಮ್ಮು ಕಾಶ್ಮಿರದ ಸ್ವತಂತ್ರ ಶಾಸಕ ಇಂಜಿನಿಯರ್ ಅಬ್ದುಲ್ ರಷೀದ್ ಹೇಳಿದ್ದಾರೆ.

ಜಮ್ಮು ಕಾಶ್ಮಿರ ಭಾರತದ ಅಥವಾ ಪಾಕಿಸ್ತಾನದ ಬಾಗವಲ್ಲ. ಅದೊಂದು ಸ್ವತಂತ್ರ ರಾಷ್ಟ್ರವಾಗಿದೆ. ನನ್ನನ್ನು ಗಲ್ಲಿಗೇರಿಸದರೂ ಕೂಡಾ ಇದನ್ನೇ ಹೇಳುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾನೆ.

ಶಾಸಕನಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ದೇಶದ ಸಾರ್ವಭಾಮತೆಯನ್ನು ರಕ್ಷಿಸುವುದಾಗಿ ತೆಗೆದುಕೊಂಡು ಪ್ರಮಾಣ ವಚನದ ಬಗ್ಗೆ ಬಿಜೆಪಿ ಸದಸ್ಯ ರವೀಂದ್ರ ರೈನಾ ನೆನಪಿಸಿದಾಗ, ನಾನು ಯಾವುದೇ ಕಾರಣಕ್ಕೂ ಆ ರೀತಿ ಹೇಳುವುದಿಲ್ಲ ಎಂದು ಆಜ್ಞಾನ ಮೆರೆದಿದ್ದಾನೆ.

ನನಗೆ ಜೈಲಿಗೆ ಕಳುಹಿಸಿ ಅಥವಾ ಚುನಾವಣೆಯಿಂದ ಸ್ಪರ್ಧಿಸದಂತೆ ತಡೆಯಿರಿ ಅಥವಾ ಗಲ್ಲಿಗೇರಿಸಿ ಕಾಶ್ಮಿರ ವಿಷಯದಲ್ಲಿ ನನ್ನ ನಿಲುವಿನಲ್ಲಿ ಬದಲಾವಣೆಯಿಲ್ಲ. ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಜನ ತಮ್ಮ ಜೀವವನ್ನು ತ್ಯಾಗ ಮಾಡಿದ್ದಾರೆ ಎಂದು ಗುಡುಗಿದರು.

ನಾನು ಭಾರತದ ಸಾರ್ವಭೌಮತೆಯ ವಿರುದ್ಧವಾಗಿಲ್ಲ. ಕೇವಲ ಜಮ್ಮು ಕಾಶ್ಮಿರದ ಬಗ್ಗೆ ಮಾತನಾಡುತ್ತಿದ್ದೇನೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಾವು ನಲುಗುತ್ತಿದ್ದೇವೆ, ವಿಶ್ವಸಂಸ್ಥೆಗಾಗಲಿ ಅಥವಾ ಕಾಶ್ಮಿರ ವಿಧಾನಸಭೆಗಾಗಲಿ ಜಮ್ಮು ಕಾಶ್ಮಿರದ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಹಕ್ಕಿಲ್ಲ ಎಂದು ಜಮ್ಮು ಕಾಶ್ಮಿರದ ಸ್ವತಂತ್ರ ಶಾಸಕ ಇಂಜಿನಿಯರ್ ಅಬ್ದುಲ್ ರಷೀದ್ ತಿಳಿಸಿದ್ದಾನೆ.

Comments are closed.