ನವದೆಹಲಿ: ಉತ್ತರಪ್ರದೇಶ ವಿಧಾನಸಭೆ ಚುನಾವಣೆಗೆ ತಿಂಗಳುಗಳು ಬಾಕಿ ಉಳಿದಿರುವಂತೆ ಬಿಜೆಪಿ ಸಿದ್ದತೆ ಆರಂಭಿಸಿದೆ. ಜಗತ್ತಿನ ಯಾವುದೇ ಶಕ್ತಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಗುಡುಗಿದ್ದಾರೆ.
ಖಾಸಗಿ ಚಟಾನೆಲ್‌ಗೆ ಸಂದರ್ಶ ನೀಡಿದ ಅವರು, ರಾಮಮಂದಿರ ನಿರ್ಮಾಣದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಶೀಘ್ರದಲ್ಲಿಯೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ರಾರಮಂದಿರ ನಿರ್ಮಾಣದ ಬಗ್ಗೆ ಚಿಂತೆ ಬೇಡ, ಮುಸ್ಲಿಂ ಸಮುದಾಯದಿಂದಲೂ ಬೆಂಬಲ ವ್ಯಕ್ತವಾಗಿದೆ. 60 ಲಕ್ಷಕ್ಕೂ ಹೆಚ್ಚಿನ ಮುಸ್ಲಿಮರು ಈಗಾಗಲೇ ತಮ್ಮ ಬೆಂಬಲ ಸೂತಿಸಿದ್ದಾರೆ. ಯಾರೊಬ್ಬರು ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಯಾಗುತ್ತಾರೆ ಎಂದು ಭಾವಿಸಿಲ್ಲವೆಂದು ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರದ ಅವಧಿಯಲ್ಲಿಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ. ಜಗತ್ತಿನ ಯಾವ ಶಕ್ತಿಗೂ ರಾಮಮಂದಿರ ನಿರ್ಮಾಣ ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕೇಸರಿ ಬಣ್ಣವೆಂದರೆ ರಾಷ್ಟ್ರಭಕ್ತಿ. ಜಿಹಾದ್ ಎಂದರೆ ಭಯೋತ್ಪಾದನೆ. ರಾಷ್ಟ್ರಭಕ್ತಿ ಮತ್ತು ಭಯೋತ್ಪಾದನೆ ಪರಸ್ಪರ ವಿರುದ್ಧ ಪದಗಳಾಗಿವೆ. ಪ್ರತ್ಯೇಕತವಾದ ನೆಪದಲ್ಲಿ ಎರಡು ಪದಗಳನ್ನು ಹೋಲಿಸುವುದು ಸರಿಯಲ್ಲ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ತಿಳಿಸಿದ್ದಾರೆ.
Comments are closed.