ರಾಷ್ಟ್ರೀಯ

50 ಬೀದಿ ನಾಯಿಗಳ ಜೀವಂತ ದಹನ; ದೂರು ದಾಖಲು

Pinterest LinkedIn Tumblr

Dogsಚೆನ್ನೈ: ಸುಮಾರು 50 ಬೀದಿ ನಾಯಿಗಳನ್ನು ಜೀವಂತವಾಗಿ ಸುಟ್ಟು ಹಾಕಿರುವ ಭೀಭತ್ಸ ಘಟನೆ ಚೆನ್ನೈನಿಂದ 50 ಕಿಲೋ ಮೀಟರ್ ದೂರದಲ್ಲಿರುವ ಮೇಲ್ ಮರುವತ್ತೂರ್ ಸಮೀಪದ ಕೀಝಾಮುರ್ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕುರಿ ಮತ್ತು ಮೇಕೆಗಳ ಮೇಲೆ ನಾಯಿ ದಾಳಿ ನಡೆಸುತ್ತಿದ್ದರಿಂದ ರೋಸಿಹೋಗಿದ್ದ ಕೆಲವು ಗ್ರಾಮಸ್ಥರು ಈ ದುಷ್ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಗ್ರಾಮಸ್ಥರೊಬ್ಬರು ಪ್ರಾಣಿದಯಾ ಸಂಘಟನೆ ಕಾರ್ಯಕರ್ತ ಪಿ.ಅಶ್ವತ್ಧ ಅವರಿಗೆ ಮಾಹಿತಿ ನೀಡಿದ ನಂತರ ಬೆಳಕಿಗೆ ಬಂದಿತ್ತು. ಘಟನೆ ನಡೆದು ನಾಲ್ಕು ದಿನಗಳ ನಂತರ ವಿಷಯ ತಿಳಿಸಿದ್ದರು.

ಈಗ ಅಶ್ವತ್ಧ ಅವರ ದೂರಿನ ಆಧಾರದ ಮೇಲೆ ಮೇಲ್ ಮರುವತ್ತೂರ್ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಮುರಳಿ, ಮುತ್ತು, ಮುರುಗದಾಸ್ ಮತ್ತು ಜೀವ ವಿರುದ್ಧ ದೂರನ್ನು ದಾಖಲಿಸಿಕೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಕೆಲವು ಬೀದಿ ನಾಯಿಗಳು ಕುರಿ, ಮೇಕೆ ಮೇಲೆ ದಾಳಿ ನಡೆಸುತ್ತಿದ್ದವು, ನಾಯಿ ಕಚ್ಚಿದ್ದರಿಂದ ಗಾಯಗೊಂಡಿದ್ದ ದನಗಳು ಸಾವಿಗೀಡಾಗಿರುವುದಾಗಿ ಗ್ರಾಮಸ್ಥರು ದೂರಿರುವುದಾಗಿ ಪೊಲೀಸರು ವಿವರಿಸಿದ್ದಾರೆ.

ಏತನ್ಮಧ್ಯೆ ನಾಯಿ ದಾಳಿಯಿಂದ ಕುರಿ, ಮೇಕೆ ಗಾಯಗೊಂಡಿರುವುದು ಗ್ರಾಮದಲ್ಲಿ ಎಲ್ಲಿಯೂ ಪತ್ತೆಯಾಗಿಲ್ಲ. ಅಲ್ಲದೇ ನಾನು ನಾಯಿ ಹತ್ಯೆ ಕುರಿತಂತೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರನ್ನು ಭೇಟಿಯಾಗಿ ವಿಚಾರಿಸಿದ್ದೆ. ಆ ರೀತಿ ಘಟನೆ ನಡೆದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ ಗ್ರಾಮದಲ್ಲಿ 50ಕ್ಕೂ ಹೆಚ್ಚು ನಾಯಿಗಳನ್ನು ಕೊಂದಿರುವುದಕ್ಕೆ ನಾನು ದಾಖಲೆ ನೀಡಬಲ್ಲೆ ಎಂದು ಅಶ್ವತ್ಥ ಇಂಗ್ಲಿಷ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
-ಉದಯವಾಣಿ

Comments are closed.