ರಾಷ್ಟ್ರೀಯ

ಲಿಂಕ್ಡ್‌ಇನ್‌ ಖರೀದಿಸಿದ ಮೈಕ್ರೋಸಾಫ್ಟ್‌

Pinterest LinkedIn Tumblr

linkನವದೆಹಲಿ: ಪ್ರಸಿದ್ಧ ವೃತ್ತಿಪರ ಸಾಮಾಜಿಕ ಜಾಲತಾಣ ಲಿಂಕ್ಡ್‌ಇನ್‌ ಅನ್ನು ಐಟಿ ದಿಗ್ಗಜ ಸಂಸ್ಥೆ ಮೈಕ್ರೋಸಾಫ್ಟ್‌ ಕಂಪೆನಿ ಖರೀದಿಸಿದೆ.

ಮೈಕ್ರೋಸಾಫ್ಟ್‌ ಕಂಪೆನಿಯ ಸಿಇಒ ಸತ್ಯ ನಾದೇಲಾ ಹಾಗೂ ಲಿಂಕ್ಡ್‌ಇನ್‌ ಕಂಪೆನಿಯ ವರಿಷ್ಠರಾದ ರೀಡ್‌ ಹಾಫ್‌ಮನ್‌ ಮತ್ತು ಜೆಫ್‌ ವಿನ್ನೆರ್‌ ಅವರು ಸೋಮವಾರ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

26.2 ಬಿಲಿಯನ್‌ ಡಾಲರ್‌ಗೆ ಲಿಂಕ್ಡ್‌ಇನ್‌ ಜಾಲತಾಣವನ್ನು ಮಾರಾಟ ಮಾಡಲಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಖರೀದಿ ಪ್ರಕ್ರಿಯೆ ಮುಗಿಯಲಿದೆ ಎಂದು ಮೂಲಗಳು ತಿಳಿಸಿವೆ.

Comments are closed.