ರಾಷ್ಟ್ರೀಯ

ಯುವತಿಯೊಬ್ಬಳನ್ನು ಅಪಹರಿಸಿ ಚಲಿಸುತ್ತಿರುವ ಕಾರಿನಲ್ಲಿಯೇ ಸಾಮೂಹಿಕ ಅತ್ಯಾಚಾರ ನಡೆಸಿದ ಮೂವರು ಕಾಮುಕರು

Pinterest LinkedIn Tumblr

rape

ಹೊಸದಿಲ್ಲಿ : ರಾಷ್ಟ್ರರಾಜಧಾನಿಯಲ್ಲಿ ಅತ್ಯಾಚಾರ ಪ್ರಕರಣಗಳು ಮುಂದುವರಿದಿದ್ದು , ಶನಿವಾರ ಮಧ್ಯಾಹ್ನ ಯುವತಿಯೊಬ್ಬಳನ್ನು ಅಪಹರಿಸಿ ಚಲಿಸುತ್ತಿರುವ ಕಾರಿನಲ್ಲಿ ಮೂವರು ಕಾಮುಕರು ಸರಣಿ ಅತ್ಯಾಚಾರ ನಡೆಸಿದ ಬಗ್ಗೆ ದೂರು ದಾಖಲಾಗಿದೆ.

ಸಂತ್ರಸ್ತ 21 ವರ್ಷದ ಯುವತಿ ದೂರು ದಾಖಲಿಸಿದ್ದು ,ನಾನು ಊಟ ತರಲೆಂದು ತೆರಳುತ್ತಿದ್ದ ವೇಳೆ ನನ್ನನ್ನು ಅಪಹರಿಸಿ ಅತ್ಯಾಚಾರ ನಡೆಸಿದ್ದಾರೆಎಂದು ಹೇಳಿಕೊಂಡಿದ್ದಾಳೆ.

ಬೂದು ಬಣ್ಣದ ಕಾರಿನಲ್ಲಿ ಬಂದು ನನ್ನನ್ನು ಕಾರಿನೊಳಗೆ ಎಳೆದುಕೊಂಡು 2 ಗಂಟೆಗಳ ಕಾಲ ಸುತ್ತಾಡಿಸಿ ನನ್ನ ಮೇಲೆ ಸರದಿಯಂತೆ ರೇಪ್‌ಗೆçದಿದ್ದಾರೆ ಎಂದು ಯುವತಿ ದೂರಿನಲ್ಲಿ ಹೇಳಿಕೊಂಡಿದ್ದಾಳೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್‌ ಅಧಿಕಾರಿಯೊಬ್ಬರು ಯುವತಿಯ ಹೇಳಿಕೆಯಲ್ಲಿ ಗೊಂದಲಗಳು ಕಂಡು ಬರುತ್ತಿವೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದೇವೆಎಂದು ತಿಳಿಸಿದ್ದಾರೆ. ಈಗಾಗಲೇ ಮೂವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Comments are closed.