ರಾಷ್ಟ್ರೀಯ

ಸಿಂಹದ ಜೊತೆ ಸೆಲ್ಫಿ ಬೇಡವೆಂದ ಗುಜರಾತ್ ಅರಣ್ಯ ಇಲಾಖೆ

Pinterest LinkedIn Tumblr

lion

ಅಹಮದಾಬಾದ್: ಪ್ರವಾಸಿಗರು ಕಾಡುಪ್ರಾಣಿಗಳ ಜೊತೆ ಸೆಲ್ಪಿ ತೆಗೆದುಕೊಳ್ಳುವ ಹುಚ್ಚು ಸಾಹಸ ಮಾಡದಿರಿ ಎಂದು ಗುಜರಾತ್ ಅರಣ್ಯ ಇಲಾಖೆ ಸೂಚಿಸಿದೆ.

ಅತ್ಯಂತ ಅಪಾಯಕಾರಿ ಪ್ರಾಣಿಯಾದ ಸಿಂಹದ ಜತೆ ಸೆಲ್ಪಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಭರಾಟೆಯಲ್ಲಿ ನಿಮ್ಮ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆಯಿದೆ ಎಂದು ಗುಜರಾತ್ನ ವನ್ಯಜೀವಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೆಲ್ಪಿ ಸಾವುಗಳನ್ನು ಗಮನದಲ್ಲಿಟ್ಟುಕೊಂಡು ಪ್ರವಾಸಿಗರಿಗೆ ಗುಜರಾತ್ ಅರಣ್ಯ ಇಲಾಖೆ ಕಿವಿಮಾತು ಹೇಳಿದೆ. ಒಂದು ವೇಳೆ ಈ ರೀತಿಯ ಕೆಲಸ ಮಾಡುವುದು ಕಂಡು ಬಂದರೆ ವನ್ಯಜೀವಿ ಕಾಯ್ದೆ 1972 ರ ಅನ್ವಯ ಅವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಗುಜರಾತ್ನ ಗಿರ್ ಅರಣ್ಯ ಪ್ರದೇಶದಲ್ಲಿ ಸಿಂಹಗಳ ಸಂತತಿಯಲ್ಲಿ ಗಣನೀಯ ಏರಿಕೆ ಕಂಡಿದ್ದು, ಸೆಲ್ಪಿ ಗೀಳಿನಲ್ಲಿ ಹಲವರು ಪ್ರಾಣ ಕಳೆದುಕೊಂಡಿರುವ ನಿದರ್ಶನಗಳಿವೆ ಹಾಗಾಗಿ ಗುಜರಾತ್ನಲ್ಲಿ ಈ ರೀತಿಯ ಆದೇಶ ಹೊರಡಿಸಲಾಗಿದೆ.

Comments are closed.