ಕರಾವಳಿ

ಪತ್ರಕರ್ತರ ಕೆಂಗಣ್ಣಿಗೆ ಗುರಿಯಾದ ಅನುಪಮಾ ಶೆಣೈ ! ಫೇಸ್ ಬುಕ್  ಅವಹೇಳನಕಾರಿ ಸ್ಟೇಟಸ್ ವಿರುದ್ಧ ದೂರು ದಾಖಲು ಮಾಡಿದ್ದೇಕೆ…?

Pinterest LinkedIn Tumblr

Anupama

ಬಳ್ಳಾರಿ: ತಮ್ಮ ರಾಜಿನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿ ಬಿತ್ತರಿಸಿದ ಮಾಧ್ಯಮಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸ್ಟೇಟಸ್ ಹಾಕಿರುವ ಮಾಜಿ ಡಿವೈಎಸ್ ಪಿ ಅನುಪಮಾ ಶಣೈ ಎಂಬ ಫೇಸ್ ಬುಕ್ ಖಾತೆ ನಿರ್ಹಹಣೆದಾರರ ವಿರುದ್ಧ ದೂರು ದಾಖಲಾಗಿದೆ.

ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಎಂಬ ಹೆಸರಿನ ಫೇಸ್ ಬುಕ್ ಖಾತೆ ನಿರ್ವಹಣೆ ಮಾಡುತ್ತಿರುವವರ ವಿರುದ್ಧ ಬಳ್ಳಾರಿ ಮೀಡಿಯಾ ಕ್ಲಬ್‌ ವತಿಯಿಂದ ದೂರು ನೀಡಲಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಳ್ಳಾರಿ ಎಸ್‌ಪಿ ವಿಜಯ ಡಂಬಳಗೆ ಅವರಿಗೆ ಮನವಿ ಮಾಡಲಾಗಿದೆ.

ಮನವಿಯಲ್ಲಿ “ಫೇಸ್‌ಬುಕ್‌ನಲ್ಲಿ ಮಾಧ್ಯಮದವರ ವಿರುದ್ಧ ಅವಹೇಳನಕಾರಿಯಾಗಿ ಸ್ಟೇಟಸ್ ಹಾಕಿರುವುದು ಖಂಡನೀಯ. ದಿನನಿತ್ಯ ನಡೆಯುವ ಘಟನೆ, ಬೆಳವಣಿಗೆಗಳ ಬಗ್ಗೆ ವರದಿ ಮಾಡುವುದೇ ಮಾಧ್ಯಮದವರ ವೃತ್ತಿ. ಅಂತಹ ಮಾಧ್ಯಮದವರ ವಿರುದ್ಧ ಫೇಸ್‌ಬುಕ್‌ನಲ್ಲಿ ‘ಬೈಟ್ಸ್ ಕೊಡಿ, ಬೈಟ್ಸ್ ಕೊಡಿ ಅಂತ ಹದ್ದುಗಳ ಥರ ಕಿತ್ತಾಡ್ಕೊಂಡು ಬರೀ ಅಸ್ಥಿಪಂಜರ ಉಳಿದಿದೆ. ಅಸ್ಥಿಪಂಜರ ಅಶ್ಲೀಲವಲ್ಲ. ಬೋ..ಮಕ್ಳ ಇನ್ನೂ ಸಿಡಿಬೇಕಾ’ ಎಂದು ಪೋಸ್ಟ್ ಮಾಡುವ ಮೂಲಕ ಅವಮಾನಗೊಳಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Comments are closed.