ಕರಾವಳಿ

ಮಾಣಿ ಸಮೀಪ ಓಮ್ನಿ ಕಾರು ಕೆಎಸ್ಸಾರ್ಟಿಸಿ ಬಸ್‌ಗೆ ಡಿಕ್ಕಿ : ಮೂವರು ಸಾವು – ಆರು ಮಂದಿ ಗಂಭೀರ

Pinterest LinkedIn Tumblr

Maani_axident_1

ಮಂಗಳೂರು / ಬಂಟ್ವಾಳ, ಜೂ.12: ಓಮ್ನಿ ಕಾರು ಮತ್ತು ಕೆಎಸ್ಸಾರ್ಟಿಸಿ ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟು, ಆರು ಮಂದಿ ಗಂಭೀರ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನೇರಳಕಟ್ಟೆ ಸಮೀಪದ ಕೊಡಾಜೆಯ ಮಾಣಿ- ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳನ್ನು ಪುತ್ತೂರಿನ ಸಂಜೀವ ಶೆಟ್ಟಿ ಬಟ್ಟೆ ಮಳಿಗೆಯ ಸಿಬ್ಬಂದಿಗಳಾದ ಸಂಧ್ಯಾ, ನಯನಾ ಹಾಗೂ ಓಮ್ನಿ ಕಾರಿನ ಚಾಲಕ ತೇಜಸ್ ಎಂದು ಗುರುತಿಸಲಾಗಿದೆ.

Maani_axident_2 Maani_axident_3 Maani_axident_4

ಮಂಗಳೂರಿನಿಂದ ಪುತ್ತೂರು ಕಡೆ ಸಂಚಾರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ಗೆ ಪುತ್ತೂರಿನಿಂದ ಪಣೋಲಿಬೈಲ್ ಕಡೆ ಸಂಚಾರಿಸುತ್ತಿದ್ದ ಓಮ್ನಿ ಕಾರು ತನ್ನ ಮುಂದಿನಿಂದ ಸಾಗುತ್ತಿದ್ದ ಆಟೊ ರಿಕ್ಷಾವೊಂದನ್ನು ಓವರ್‌ಟೇಕ್ ಮಾಡುವ ಸಂದರ್ಭ ಈ ಅಪಘಾತ ಸಂಭವಿಸಿದೆ.

ಪುತ್ತೂರಿನ ಸಂಜೀವ ಶೆಟ್ಟಿ ಜವುಳಿ ಮಳಿಗೆಯ 11 ಮಂದಿ ಸಿಬ್ಬಂದಿ ಪಣೋಲಿಬೈಲಿನ ದೈವಸ್ಥಾನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆಂದು ಪುತ್ತೂರಿನಿಂದ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಇವರಿದ್ದ ಓಮ್ನಿ ಕಾರು ಕೊಡಾಜೆ ತಲುಪಿದೆ ವೇಳೆ ಎದುರಿದ್ದ ಆಟೊ ರಿಕ್ಷಾವೊಂದನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಮಂಗಳೂರಿನಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸ್ ಬಸ್‌ಗೆ ಢಿಕ್ಕಿ ಹೊಡೆದಿದೆ.

Maani_axident_5 Maani_axident_6 Maani_axident_7 Maani_axident_8

ಅಪಘಾತದ ತೀವ್ರತೆಗೆ ಓಮ್ನಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಓಮ್ನಿ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಓಮ್ನಿಯಲ್ಲಿದ್ದ ಇತರ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಈ ಪೈಕಿ ಮೂವರ ಸ್ಥಿತಿ ತೀವ್ರ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

Comments are closed.