ರಾಷ್ಟ್ರೀಯ

ಮತಲಂಚ;ಕುಟುಕು ಕಾರ್ಯಾಚರಣೆ ಹಿಂದಿನ ರೂವಾರಿ ಜೆಡಿಎಸ್ ನ ಅಲಿ?

Pinterest LinkedIn Tumblr

cash--_647_050916104143ನವದೆಹಲಿ: ಕರ್ನಾಟಕದಲ್ಲಿ ರಾಜ್ಯಸಭೆ ಚುನಾವಣೆ ಮುಂದೂಡುವ ಅಗತ್ಯವಿಲ್ಲ ಎಂದು ಹೇಳಿರುವ ಅಳಂದ ಕ್ಷೇತ್ರದ ಕೆಜಿಪಿ ಶಾಸಕ ಬಿಆರ್ ಪಾಟೀಲ್, ಎರಡು ರಾಷ್ಟ್ರೀಯ ಸುದ್ದಿವಾಹಿನಿಗಳ ವಿರುದ್ಧ ಎನ್ ಬಿಎಸ್ ಎ(ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರ)ಗೆ ದೂರು ನೀಡಿರುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು, ಪಾಟೀಲ್ ನೀಡಿರುವ ಮಾಹಿತಿ ಪ್ರಕರಣಕ್ಕೆ ಮತ್ತೊಂದು ತಿರುವು ದೊರಕಿಸಿಕೊಟ್ಟಂತಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಬಿಆರ್ ಪಾಟೀಲ್ ಹೇಳಿದ್ದೇನು?
ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಜೊತೆ ನಾವು ಒಂಬತ್ತು ಮಂದಿ ಹೋಟೆಲ್ ನಲ್ಲಿ ಇದ್ದೇವು. ಆ ಸಂದರ್ಭದಲ್ಲಿ ಡ್ಯಾನಿಶ್ ಅಲಿ ಸ್ನೇಹಿತರು ಅಂತ ಹೇಳಿಕೊಂಡು ಕೆಲವರು ಐಪಿಎಲ್ ಪಂದ್ಯ ನೋಡಲು ಒಳಗೆ ಬಂದಿದ್ದರು ಎಂದು ಹೇಳುವ ಮೂಲಕ ಮತಲಂಚದ ಕುಟುಕು ಕಾರ್ಯಾಚರಣೆ ಕುರಿತು ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.

ಹೀಗೆ ನಾವು ಲೋಕಾಭಿರಾಮ ಹರಿಟಿರುವುದನ್ನೇ ತಪ್ಪು, ತಪ್ಪಾಗಿ ಸುದ್ದಿ ಪ್ರಸಾರ ಮಾಡಿದ್ದಾರೆ. ಬಂದವರಲ್ಲಿ ಯಾರು ನಮ್ಮ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ. ಹಾಗಾಗಿ ಸುದ್ದಿಯ ನಿಖರತೆ ಇಲ್ಲದೆ ಸುದ್ದಿ ಪ್ರಸಾರ ಮಾಡಿರುವುದಕ್ಕೆ 2 ಚಾನೆಲ್ ವಿರುದ್ಧ ದೂರು ದಾಖಲಿಸಿರುವುದಾಗಿ ಹೇಳಿದರು.

ರಾಜ್ಯಸಭೆ ಚುನಾವಣೆಯಲ್ಲಿ ಮತಚಲಾವಣೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ರಹಸ್ಯ ಕಾರ್ಯಾಚರಣೆ ವರದಿ ರಾಷ್ಟ್ರವ್ಯಾಪಿ ಸಂಚಲನ ಮೂಡಿಸಿತ್ತು. ಇಂಡಿಯಾ ಟುಡೇ, ಟೈಮ್ಸ್ ನೌ ರಹಸ್ಯ ಕಾರ್ಯಾಚರಣೆ ಗಂಭೀರ ಸ್ವರೂಪ ಪಡೆದಿದ್ದು, ಕರ್ನಾಟಕದಲ್ಲಿ ರಾಜ್ಯಸಭೆ ಚುನಾವಣೆ ನಡೆಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಮಂಗಳವಾರ ಮಹತ್ವದ ಸಭೆ ನಡೆಸಿ, ಈ ಬಗ್ಗೆ ಶುಕ್ರವಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
-ಉದಯವಾಣಿ

Comments are closed.