ಅಂತರಾಷ್ಟ್ರೀಯ

40 ಸೆಕೆಂಡ್‌ನ‌ಲ್ಲಿ ಇಸ್ತ್ರಿ ಹಾಕುವ ರೊಬೋ ಯಂತ್ರ

Pinterest LinkedIn Tumblr

roboಆಧುನಿಕ ಕಾಲದಲ್ಲಿ ಸಮಯ ಇಲ್ಲ ಅನ್ನುವವರ ಸಂಖ್ಯೆ ದೊಡ್ಡದು. ಬಟ್ಟೆ ತೊಳೆದು ಇಸ್ತ್ರಿ ಹಾಕೋದು ಅಂದ್ರೆ ಕಿರಿಕಿರಿ ಅನ್ನೋವರ ಸಂಖ್ಯೆಯೂ ಕಡಿಮೆ ಏನಿಲ್ಲ. ಬಟ್ಟೆಯನ್ನು ವಾಷಿಂಗ್‌ ಮಷೀನ್‌ನಲ್ಲೇ ತೊಳೆದರೂ, ಇಸ್ತ್ರಿ ನಾವೇ ಮಾಡಬೇಕು ಅಥವಾ ಲಾಂಡ್ರಿಗೆ ಕೊಡಬೇಕು. ಆದರೆ ಈ ಸಮಸ್ಯೆಯನ್ನು ನಿವಾರಿಸುವ ರೊಬೋ ಯಂತ್ರವೊಂದು ಇದೀಗ ಬಂದಿದೆ. ಪೂರ್ಣ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಈ ಯಂತ್ರ, ಕೇವಲ 40 ಸೆಕೆಂಡ್‌ನ‌ಲ್ಲಿ ಒಂದು ಬಟ್ಟೆಗೆ ಇಸ್ತ್ರಿ ಹಾಕುವುದಲ್ಲದೇ ಅಷ್ಟೇ ಚೆನ್ನಾಗಿ ಮಡಚಿಯೂ ಇಡಬಲ್ಲದು. ಕೇವಲ ಬಟ್ಟೆ ಮಡಚುವುದಾದರೆ ಈ ಯಂತ್ರ ತೆಗೆದುಕೊಳ್ಳುವ ಸಮಯ 10 ಸೆಕೆಂಡ್‌ ಮಾತ್ರ. ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದ ಸ್ಟಾರ್ಟ್‌ಅಪ್‌ ಕಂಪನಿಯೊಂದು ಈ ಯಂತ್ರವನ್ನು ಆವಿಷ್ಕರಿಸಿದೆ.

“ಫೋಲ್ಡಿಮೇಟ್‌’ ಎಂದು ಕರೆಯಲಾಗುವ ಈ ಯಂತ್ರದೊಳಗೆ ರೊಬೋಟಿಕ್‌ ಕೈಗಳಿದ್ದು, ಬಟ್ಟೆ ಮಡಿಚಿಡಲು ನೆರವಾಗುತ್ತದೆ. ಈ ಯಂತ್ರ ಮಾರುಕಟ್ಟೆಗೆ ಬಿಡುಗಡೆಗೆ ಸಿದ್ಧವಾಗಿದ್ದು ಸುಮಾರು 57ಸಾವಿರ ರೂ. ಬೆಲೆ ಹೊಂದಿದೆ.

ಲಾಂಡ್ರಿ ರೊಬೋ ಹೇಗೆ ಕೆಲಸ ಮಾಡುತ್ತೆ?
ಲಾಂಡ್ರಿ ಯಂತ್ರದ ಎದುರು ಬಟ್ಟೆಯನ್ನು ಕ್ಲಿಪ್‌ಗೆ ನೇತು ಹಾಕಿದರೆ ಸಾಕು, ಅದುವೇ ಬಟ್ಟೆಯನ್ನು ಒಳಗೆ ಎಳೆದುಕೊಳ್ಳುತ್ತದೆ. ಹಾಗೆ ಬಟ್ಟೆಯನ್ನು ಒಳಗೆಳೆದ ಬಳಿಕ ಅದರಲ್ಲಿರುವ ಪ್ಲೇಟ್‌ಗಳು ಬಟ್ಟೆಯನ್ನು ಬಿಸಿ ಮಾಡಿ ಇಸ್ತ್ರಿ ಹಾಕಿದಂತೆ ನೆರಿಗೆಗಳನ್ನು ತೆಗೆಯುತ್ತದೆ. ಇದೇ ವೇಳೆ ಅದರಲ್ಲಿರುವ ಸಣ್ಣ ರೊಬೋಟಿಕ್‌ ಸರಳುಗಳು, ಬಟ್ಟೆಯನ್ನು ಮಡಚುವ ಕೆಲಸವನ್ನೂ ಮಾಡುತ್ತದೆ. 32 ಇಂಚು ಎತ್ತರ 28 ಇಂಚು ಅಗಲದ ಈ ಯಂತ್ರ ಒಟ್ಟು 29 ಕೇಜಿಯಷ್ಟು ಭಾರವಿದೆ. ಒಂದು ಸಲಕ್ಕೆ 15ರಿಂದ 20 ಬಟ್ಟೆಗಳನ್ನು ಫ‌ಟಾಫ‌ಟ್‌ ಆಗಿ ಇಸಿŒ ಹಾಕಿ ಮಡಚಿ ಇಡಬಲ್ಲದು. ಯಂತ್ರ ನಿಯಂತ್ರಣಕ್ಕೆ ಎದುರು ಭಾಗ ಸ್ಮಾರ್ಟ್‌ ನಿಯಂತ್ರಣ ವ್ಯವಸ್ಥೆಯೂ ಇದೆ.
-ಉದಯವಾಣಿ

Comments are closed.