ಮನೋರಂಜನೆ

ನಟ ರಿತೇಶ್ ದೇಶ್ಮುಖ್ ಕುಟುಂಬದಲ್ಲಿ ಮತ್ತೆ ಸಂತಸ !

Pinterest LinkedIn Tumblr

rithesh

ಮುಂಬೈ: ಬಾಲಿವುಡ್ನ ಕ್ಯೂಟ್ ಕಪಲ್ ಎಂದೇ ಬಿಂಬಿತರಾದ ರಿತೇಶ್ ದೇಶ್ಮುಖ್ ಹಾಗೂ ಜೆನಿಲಿಯಾ ಡಿಸೋಜಾ ಕುಟುಂಬದಲ್ಲಿ ಇದೀಗ ಸಂಭ್ರಮ ಮುಗಿಲು ಮುಟ್ಟಿದೆ. ಇದಕ್ಕೆ ಕಾರಣ ಜೆನಿಲಿಯಾ ಎರಡನೇ ಮಗುವಿಗೆ ಜನ್ಮ ನೀಡಿರುವುದು.

ಹೌಸ್ಫುಲ್ 3 ಚಿತ್ರದ ನಟ ರಿತೇಶ್ ತಮ್ಮ ಸಂಭ್ರಮವನ್ನು ಟ್ವಿಟರ್ ಮೂಲಕ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲ ತಮ್ಮ ಒಂದು ವರ್ಷದ ಮಗು ರಿಯಾನ್ ಹೆಸರಿನಲ್ಲಿ ಕೂಡ ಟ್ವೀಟ್ ಮಾಡಿದ್ದು, ಅಮ್ಮ ಹಾಗೂ ಅಪ್ಪ ನನಗೆ ಸಹೋದರನನ್ನು ನೀಡಿದ್ದಾರೆ. ಇನ್ನು ಮುಂದೆ ನನಗೆ ಆಟ ಆಡಲಿಕ್ಕೆ ಜೊತೆಗಾರ ಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ. ಜೆನಿಲಿಯಾ ಕೂಡ ಟ್ವೀಟ್ ಮಾಡಿದ್ದು, ದೇವರಿಗೆ ಧನ್ಯವಾದ ಹೇಳಿದ್ದಾರೆ.

ನಿರ್ದೇಶಕ ಕರಣ್ ಜೋಹರ್, ಸಾಜಿದ್ ಖಾನ್, ಫರ್ಹಾ ಖಾನ್ ಸೇರಿದಂತೆ ಬಾಲಿವುಡ್ ಮಂದಿ ಶುಭಾಶಯಗಳ ಮಳೆಗರೆದಿದ್ದಾರೆ.

Comments are closed.