ರಾಷ್ಟ್ರೀಯ

ಮದ್ಯನಿಷೇಧ ಜಾರಿಯಿಲ್ಲ, ಕಡಿಮೆ ಮದ್ಯ ಸೇವಿಸಿ ಎಂದು ಸಲಹೆ ನೀಡಿದ ಸಿಎಂ ಅಖಿಲೇಶ್ ಯಾದವ್

Pinterest LinkedIn Tumblr

akileಭಾಡೋಹಿ: ಬಿಹಾರ್‌ನಂತೆ ಉತ್ತರಪ್ರದೇಶದಲ್ಲೂ ಮದ್ಯನಿಷೇಧ ಜಾರಿಗೊಳಿಸುವ ಬಗ್ಗೆ ಮೌನವಹಿಸಿದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಜನತೆ ಕಡಿಮೆ ಪ್ರಮಾಣದಲ್ಲಿ ಮದ್ಯ ಸೇವಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕಬ್ಬು ಬೆಳೆಗಾರರ, ಮದ್ಯದಂಗಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಉದ್ಯೋಗಿಗಳ ಭವಿಷ್ಯಕ್ಕೆ ಸಂಬಂಧಿಸಿದ್ದಾಗಿದ್ದರಿಂದ ರಾಜ್ಯದಲ್ಲಿ ಮದ್ಯನಿಷೇಧ ಜಾರಿ ಅವಸರದಲ್ಲಿ ತೆಗೆದುಕೊಳ್ಳುವ ನಿರ್ಧಾರವಲ್ಲ. ಜನತೆ ಕಡಿಮೆ ಪ್ರಮಾಣದಲ್ಲಿ ಸೇವೆ ಸಲ್ಲಿಸುವಂತೆ ಮಾತ್ರ ಸಲಹೆ ನೀಡುವುದಾಗಿ ತಿಳಿಸಿದ್ದಾರೆ.

ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್, ಅಖಿಲೇಶ್ ಯಾದವ್‌ಗೆ ಉತ್ತರಪ್ರದೇಶದಲ್ಲಿ ಮದ್ಯನಿಷೇಧ ಜಾರಿಗೊಳಿಸುವಂತೆ ಸಲಹೆ ನೀಡಿದ್ದರು. ಇದೀಗ ಅಖಿಲೇಶ್ ತಮ್ಮ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ.

ಮದ್ಯ ನಿಷೇಧ ಜಾರಿಯಿಂದಾಗಿ ಸರಕಾರದ ಬೊಕ್ಕಸಕ್ಕೆ ಎದುರಾಗುವ ಹಾನಿಯನ್ನು ಬೇರೆ ಬೇರೆ ರೂಪಗಳಲ್ಲಿ ಭರಿಸಬಹುದು. ಉತ್ತರಪ್ರದೇಶ ಕೂಡಾ ಮದ್ಯನಿಷೇಧ ಜಾರಿಗೊಳಿಸುವುದು ಸೂಕ್ತ ಎಂದು ನಿತೀಶ್ ಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಸಿಎಂ ಅಖಿಲೇಶ್ ಯಾದವ್, ಸುಮಾರು 400 ಕೋಟಿ ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆಗಾಗಿ ಆಗಮಿಸಿದ್ದರು.

Comments are closed.