ರಾಷ್ಟ್ರೀಯ

ಆರ್‌ಜೆಡಿಯಿಂದ ಜೇಠ್ಮಲಾನಿ, ರಾಬ್ಡಿದೇವಿಗೆ ರಾಜ್ಯಸಭೆ ಟಿಕೆಟ್

Pinterest LinkedIn Tumblr

laluನವದೆಹಲಿ: ಬಿಜೆಪಿಯಿಂದ ಉಚ್ಚಾಟನೆಗೊಂಡ ಖ್ಯಾತ ಹಿರಿಯ ವಕೀಲ ರಾಮ್ ಜೇಠ್ಮಲಾನಿಯವರನ್ನು ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿ ರಾಜ್ಯಸಭೆಗೆ ನೇಮಕ ಮಾಡಿ ಅಚ್ಚರಿ ಮೂಡಿಸಿದೆ.

ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿಯವರನ್ನು ಕೂಡಾ ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ ಎಂದು ಆರ್‌ಜೆಡಿ ವಕ್ತಾರರು ತಿಳಿಸಿದ್ದಾರೆ.

ಸಂಸತ್ತಿನಲ್ಲಿ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಆಕ್ರಮಣಕಾರಿಯಾಗಿ ಪ್ರತಿನಿಧಿಸುತ್ತಿರುವುದರಿಂದ ಅವರಿಗೆ ಸರಿ ಸಮಾನವಾದ ಸವಾಲ್‌ ನೀಡಲು ಜೇಠ್ಮಲಾನಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಏಳು ವಿಧಾನ ಪರಿಷತ್ ಸ್ಥಾನಗಳು ಮತ್ತು ಐದು ರಾಜ್ಯಸಭೆ ಸ್ಥಾನಗಳಿಗಾಗಿ ಜೂನ್ 10 ಮತ್ತು 11 ರಂದು ಚುನಾವಣೆ ನಡೆಯಲಿದೆ.

243 ಸೀಟುಗಳ ಬಲದ ವಿಧಾನ ಸಭೆಯಲ್ಲಿ ಆರ್‌ಜೆಡಿ 80 ಶಾಸಕರನ್ನು ಹೊಂದಿರುವ ಹಿನ್ನೆಲೆಯಲ್ಲಿ ಎರಡು ರಾಜ್ಯಸಭೆ ಮತ್ತು ಎರಡು ವಿಧಾನ ಪರಿಷತ್ ಸೀಟುಗಳನ್ನು ಸುಲಭವಾಗಿ ಗೆಲ್ಲಲಿದೆ.

ಮತ್ತೊಂದು ವರದಿಗಳ ಪ್ರಕಾರ, ಜೇಠ್ಮಲಾನಿ ಲಾಲು ಯಾದವ್‌ರ ಮೇವು ಹಗರಣ ಪ್ರಕರಣಗಳ ಬಗ್ಗೆ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವುದರಿಂದ, ರಾಜ್ಯಸಭೆಯ ಸೀಟಿನ ಕೊಡುಗೆ ನೀಡಿರಬಹುದು ಎನ್ನಲಾಗುತ್ತಿದೆ.

Comments are closed.