ಮನೋರಂಜನೆ

ಕರಣ್ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಕತ್ರೀನಾ-ರಣಬೀರ್

Pinterest LinkedIn Tumblr

kaಮುಂಬೈ: ಕರಣ್ ಜೋಹರ್ ಇವತ್ತು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು ಲಂಡನ್‌ನಲ್ಲಿ ಪಾರ್ಟಿ ಆಯೋಜನೆ ಮಾಡಿದ್ರು.. ಕರಣ್ ಜೋಹರ್ ಪಾರ್ಟಿಗೆ ಬಂದ ರಣಬೀರ್ ಕಪೂರ್ ಹಾಗೂ ಕತ್ರೀನಾ ಕೈಫ್ ಒಟ್ಟಿಗೆ ಕಾಣಿಸಿಕೊಂಡಿದ್ದು ಕಂಡು ಬಂತು…

ಈ ಮೂಲಕ ರಣಬೀರ್ ಹಾಗೂ ಕತ್ರೀನಾ ಕೈಫ್ ಮತ್ತೆ ಒಂದಾಗುತ್ತಾರಾ..? ಅಂತ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.. ಈ ಬಗ್ಗೆ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಮೂಡಿವೆ..

ಇಂದು ಖ್ಯಾತ ನಿರ್ಮಾಪಕ ಕರಣ್ ಜೋಹರ್ ಬರ್ತಡೇಗೆ ಶಬನಾ ಅಜ್ಮಿ, ಫರ್ಹಾ ಖಾನ್, ಮನೀಶ್ ಸಿಸೋಡಿಯಾ, ಅಲಿಯಾ ಭಟ್, ಅನುಷ್ಕಾ ಶರ್ಮಾ, ಹಾಗೂ ವರುಣ್ ಧವನ್ ಶುಭಾಷಯ ಕೋರಿದ್ದಾರೆ. ಕರಣ್ ಜೋಹರ್ 44 ವಸಂತಕ್ಕೆ ಕಾಲಿಡುತ್ತಿದ್ದಾರೆ..

ಕರಣ್ ಜೋಹರ್ ಅವರ ಹಿಂದಿ ರಿಮೇಕ್ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ತಮನ್ನಾ ಭಾಟಿಯಾ ನಟಿಸಲಿದ್ದಾರಂತೆ. ತೆಲಗು ಚಿತ್ರ ಓಪರಿ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲಿದ್ದಾರೆ ಕರಣ್.ಕೆಲ ಮೂಲಗಳ ಪ್ರಕಾರ ಓಪರಿ ಚಿತ್ರದಲ್ಲಿ ತಮನ್ನಾ ಭಾಟಿಯಾ ಪಾತ್ರವನನ್ನು ಮೆಚ್ಚಿದ್ದಾರಂತೆ ಕರಣ್,

Comments are closed.