ರಾಷ್ಟ್ರೀಯ

ಭದ್ರತಾ ಸಮಸ್ಯೆ, ಲಿಬಿಯಾ ಪ್ರಯಾಣಕ್ಕೆ ಭಾರತೀಯರಿಗೆ ನಿಷೇಧ

Pinterest LinkedIn Tumblr

1-Libya-webನವದೆಹಲಿ: ಉತ್ತರ ಆಫ್ರಿಕಾದ ಲಿಬಿಯಾದಲ್ಲಿ ಭಾರತೀಯ ನಾಗರೀಕರಿಗೆ ಭದ್ರತೆಯ ಸಮಸ್ಯೆ ಇರುವುದಿಂದ ಭಾರತೀಯ ನಾಗರೀಕರು ಲಿಬಿಯಾಗೆ ತೆರಳದಂತೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

ಲಿಬಿಯಾದಲ್ಲಿ ಭಾರತೀಯ ನಾಗರೀಕರಿಗೆ ಭದ್ರತೆಯ ಸಮಸ್ಯೆ ಇದೆ. ಲಿಬಿಯಾದಲ್ಲಿರುವ ಭಾರತೀಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಲಿಬಿಯಾಗೆ ಯಾವುದೇ ಭಾರತೀಯ ನಾಗರೀಕ ತೆರಳದಂತೆ ತಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹಾಗಾಗಿ ಲಿಬಿಯಾಗೆ ತೆರಳದಂತೆ ಭಾರತೀಯ ನಾಗರೀಕರಿಗೆ ನಿಷೇಧ ಹೇರಲಾಗಿದೆ.

ಮುಂದಿನ ಆದೇಶ ಹೊರಡಿಸುವವರೆಗೆ ನಿಷೇಧ ಜಾರಿಯಲ್ಲಿರಲಿದೆ. ಹಾಗಾಗಿ ಭಾರತೀಯ ನಾಗರೀಕರು ಲಿಬಿಯಾಗೆ ತೆರಳಲು ಯೋಜನೆ ರೂಪಿಸಬಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Comments are closed.