ಅಂತರಾಷ್ಟ್ರೀಯ

ಇಂಡೋ-ಅಮೆರಿಕನ್ ಬಾಲಕನಿಗೆ 18 ರ ವಯಸ್ಸಿಗೆ ಡಾಕ್ಟರ್ ಪದವಿ!

Pinterest LinkedIn Tumblr

Indo-American-boyಕ್ಯಾಲಿಫೋರ್ನಿಯ: ಹನ್ನೆರಡರ ಪ್ರಾಯದಲ್ಲೇ ಪದವಿ ಮುಗಿಸಿದ ಕೇರಳ ಮೂಲದ ಇಂಡೋ-ಅಮೆರಿಕನ್ ಬಾಲಕ ತನಿಶ್ಕ್ ಅಪ್ರತಿಮ ಸಾಧನೆಗೆ ಅಮೆರಿಕ ಅಧ್ಯಕ್ಷ ಬರಾಕ್ ಓಬಾಮಾ ಶುಭ ಸಂದೇಶ ನೀಡಿದ್ದಾರೆ. ತನ್ನ 18 ನೇ ವಯಸ್ಸಿಗೆ ಎಮ್ ಡಿ (ಮೆಡಿಕಲ್ ಡಿಗ್ರಿ) ಪಡೆಯುವ ಇಂಗಿತ ವ್ಯಕ್ತಪಡಿಸಿರುವ ಈ ಬಾಲಕನ ಮುಂದಿನ ವಿದ್ಯಾಭ್ಯಾಸಕ್ಕೆ ಮಣೆ ಹಾಕಲು ಅಮೆರಿಕದ ಎರಡು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮುಂದೆ ಬಂದಿವೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮುಗಿಸಿರುವ ತನಿಶ್ಕ್ಗೆ ವಿದ್ಯಾರ್ಥಿವೇತನ ನೀಡಲಾಗಿದ್ದು, ಅಮೆರಿಕನ್ ರಿವರ್ ಕಾಲೇಜಿನಲ್ಲಿ ಈತ ಗಣಿತ, ವಿಜ್ಞಾನ ಮತ್ತು ವಿದೇಶಿ ಭಾಷೆಗಳ ಮೂರು ವಿಷಯಗಳಲ್ಲಿ ಪದವಿಯನ್ನು 11 ನೇ ವಯಸ್ಸಿನಲ್ಲಿ ಪಡೆದಿದ್ದಾನೆ. ಇದು ಈತನ ಸಾಧನೆಗೆ ಹಿಡಿದ ಕೈಗನ್ನಡಿ.

ಅಮೆರಿಕದ ಅಧ್ಯಕ್ಷನಾಗಬೇಕೆಂಬ ಬಯಕೆ ಹೊಂದಿರುವ ಬಾಲಕ ತನಿಶ್ಕ್ ಅಮೆರಿಕದ ಪ್ರಪಥಮ ಕಿರಿಯ ಪದವೀಧರನಾಗಿದ್ದಾನೆ. ಚಿಕ್ಕ ವಯಸ್ಸಿನಿಂದಲೂ ಚೂಟಿಯಾದ ತನಿಶ್ಕ್ ಓದಿರುವ ತರಗತಿಗಳಲ್ಲಿ ಮೊದಲ ಸ್ಥಾನ ಗಳಿಸಿದ್ದಾನೆ. ಬಾಲಕನ ಪ್ರತಿಭೆ ಕಂಡು ಆತನಿಗೆ ವಯಸ್ಸಿಗೆ ಮೀರಿದ ಸ್ಥಾನಮಾನಗಳು ಹುಡುಕಿಕೊಂಡು ಬರುತ್ತಿವೆ. ವಯಸ್ಸಿನ ಕಾರಣದಿಂದ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡದ ಕೆಲ ಪ್ರಾಧ್ಯಾಪಕರು ತನಿಶ್ಕ್ ಪ್ರಥಮ ಸ್ಥಾನ ಪಡೆದಾಗ ಕೊನೆಗೆ ಆತನ ಬೆನ್ನು ತಟ್ಟಿದ್ದಾರೆ.

Comments are closed.