ಅಂತರಾಷ್ಟ್ರೀಯ

ಭಾರತ, ಥೈಲ್ಯಾಂಡ್, ಮ್ಯಾನ್ಮಾರ್ ಸಂಪರ್ಕಕ್ಕೆ 1400 ಕಿ ಮೀ ರಸ್ತೆ

Pinterest LinkedIn Tumblr

Highwayಬ್ಯಾಂಕಾಕ್: ಭಾರತ, ಥೈಲ್ಯಾಂಡ್ ಮತ್ತು ಮ್ಯಾನ್ಮಾರ್ ದೇಶಗಳ ಸಂಪರ್ಕಕ್ಕೆ 1400 ಕಿ ಮೀ ಹೆದ್ದಾರಿ ನಿರ್ವಿುಸಲು ಮೂರು ದೇಶಗಳು ಮಾತುಕತೆ ನಡೆಸಿವೆ.

ಎರಡನೇ ಮಹಾಯುದ್ದದ ವೇಳೆ ಸುಮಾರು 73 ಸೇತುವೆಗಳು ನಿರ್ಮಾಣಗೊಂಡಿದ್ದವು. ಭಾರತದ ಆರ್ಥಿಕ ಸಹಾಯದಿಂದ ಈ ಸೇತುವೆಗಳನ್ನು ನವೀಕರಿಸಿ ಹೆದ್ದಾರಿ ಸಂಚಾರವನ್ನು ಸುಗಮಗೊಳಿಸಲಾಗುವುದು ಎಂದು ಥೈಲ್ಯಾಂಡಿನ ಭಾರತದ ರಾಯಭಾರಿ ಭಗವಂತ್ ಸಿಂಗ್ ಬಿಶ್ನೋಯಿ ಹೇಳಿದ್ದಾರೆ.

ಮುಂಬರುವ 18 ತಿಂಗಳಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಮೂರು ದೇಶಗಳ ಸಂಪರ್ಕಕ್ಕೆ ರಸ್ತೆ ಮಾರ್ಗ ಬಳಕೆ ಮಾಡಬಹುದು ಎಂದು ಅವರು ಹಾರೈಸಿದರು. ಭಾರತದ ಪೂರ್ವ ಪ್ರಾಂತ್ಯದಿಂದ ಮ್ಯಾನ್ಮಾರ್ನ ತಾಮು ನಗರಕ್ಕೆ ರಸ್ತೆ ನಿರ್ವಿುಸಲು ಉದ್ದೇಶಿಸಲಾಗಿದ್ದು, ಮೂರು ದೇಶಗಳ ಮೋಟಾರು ವಾಹನ ಕಾಯ್ದೆ ನಿಯಮಗಳ ಒಡಂಬಡಿಕೆ ಮಾಡಿಕೊಂಡು ಥೈಲ್ಯಾಂಡಿನ ಮಾಯಿ ಸೊಟ್ ಜಿಲ್ಲೆವರೆಗೆ ವಿಸ್ತರಿಸುವ ಯೋಜನೆ ಇದೆ ಎಂದು ಅವರು ನುಡಿದರು.

ಭಾರತ ಮತ್ತು ಥೈಲ್ಯಾಂಡ್ ದೇಶಗಳ ಸಾಂಸ್ಕೃತಿಕ, ಕಲೆ ಮತ್ತು ಆಧ್ಯಾತ್ಮಿಕ ಕೊಂಡಿಗಳಲ್ಲಿ ಸಾಮ್ಯತೆ ಇದ್ದು ಹೆದ್ದಾರಿ ಯೋಜನೆ ಎರಡು ದೇಶಗಳ ಬಾಂಧವ್ಯ ಹೆಚ್ಚಿಸಲಿದೆ. ಜತೆಗೆ ಪ್ರವಾಸೋದ್ಯಮ ಅಭಿವೃದ್ದಿಗೆ ಪ್ರಾತಿನಿಧ್ಯ ದೊರೆಯಲಿದೆ.

Comments are closed.