ರಾಷ್ಟ್ರೀಯ

ವಿಜಯ್ ಮಲ್ಯಾರ ಗೋವಾದಲ್ಲಿರುವ ಕಿಂಗ್ ಫಿಶರ್ ವಿಲ್ಲಾವನ್ನು ಜಪ್ತಿ !

Pinterest LinkedIn Tumblr

king fisher villa

ಗೋವಾ: ಭಾರತೀಯ ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರು.ಸಾಲ ಪಡೆದು ಅದನ್ನು ತೀರಿಸಲಾಗದೇ ವಂಚಿಸಿ ಲಂಡನ್‌ ಗೆ ಪರಾರಿಯಾಗಿರುವ ಮದ್ಯದ ದೊರೆ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದ ಗೋವಾದಲ್ಲಿರುವ ಕಿಂಗ್ ಫಿಶರ್ ವಿಲ್ಲಾವನ್ನು ಜಪ್ತಿ ಮಾಡಲಾಗಿದೆ.

ಈ ವಿಲ್ಲಾದ ಬೆಲೆ ರು.90 ಕೋಟಿಯಾಗಿದ್ದು, ಗೋವಾದಲ್ಲಿ ವಿಜಯ್ ಮಲ್ಯರ ಐಷಾರಾಮಿ ಮೋಜಿನ ಕೂಟಗಳು ನಡೆಯುತ್ತಿದ್ದ ತಾಣವಾಗಿತ್ತು. ಎಸ್ ಬಿಐ ನೇಮಿಸಿದ್ದ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ 2.30ಕ್ಕೆ ವಿಲ್ಲಾವನ್ನು ಜಪ್ತಿ ಮಾಡಿದ್ದು, ವಿಲ್ಲಾದಲ್ಲಿದ್ದ ವಾಹನಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡುರು. ಇನ್ನು ವಿಲ್ಲಾ ದ್ವಾರಕ್ಕೆ ಬೀಗಾ ಹಾಕಲಾಯಿತು.

ಕಾನೂನಿನ ನಿಯಮದ ಪ್ರಕಾರ ವಿಲ್ಲಾವನ್ನು ಜಪ್ತಿ ಮಾಡಲಾಗಿದೆ. ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಲಾಗಿದ್ದು, ಎಸ್ ಬಿಐ ಅನುಮತಿ ಇಲ್ಲದೇ ಯಾರು ಇದರೊಳಗೆ ಪ್ರವೇಶಿಸುವಂತಿಲ್ಲ. ವಿಲ್ಲಾ ಆಸ್ತಿಯ ಬಗ್ಗೆ ಲೆಕ್ಕಚಾರ ಹಾಕಿದ ನಂತರ ಅದನ್ನು ಹರಾಜು ಹಾಕಲಾಗುವುದು ಎಂದು ಅಧಿಕಾರಿ ಅನಿಲ್ ಕೊಹ್ಲಿ ಹೇಳಿದ್ದಾರೆ.

Write A Comment