ರಾಷ್ಟ್ರೀಯ

ಪಿಲಿಭಿಟ್ ನಕಲಿ ಎನ್​ಕೌಂಟರ್, 47 ಪೊಲೀಸರಿಗೆ ಜೀವಾವಧಿ ಶಿಕ್ಷೆ

Pinterest LinkedIn Tumblr

47-police-webಪಿಲಿಭಿಟ್: 1991ರಲ್ಲಿ ನಡೆದ ಪಿಲಿಭಿಟ್ ನಕಲಿ ಎನ್​ಕೌಂಟರ್​ನಲ್ಲಿ ಹತ್ತು ಸಿಖ್ಖರ ಸಾವಿಗೆ ಕಾರಣರಾದ ಉತ್ತರಪ್ರದೇಶದ ಎಲ್ಲಾ 47 ಪೊಲೀಸರಿಗೆ ಸಿಬಿಐ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಲಾಲೂ ಸಿಂಗ್ ಅವರು ಶನಿವಾರ ತಮ್ಮ ತೀರ್ಪಿನಲ್ಲಿ ಪ್ರಕರಣದಲ್ಲಿ ಎಲ್ಲಾ 47 ಮಂದಿ ಪೊಲೀಸರೂ ತಪ್ಪಿತಸ್ಥರು ಎಂಬುದು ಸಾಬೀತಾಗಿದೆ ಎಂದು ಹೇಳಿದ್ದು, ತೀರ್ಪಿನ ವೇಳೆ ಹಾಜರಿದ್ದ 20 ಪೊಲೀಸರನ್ನು ತತ್ ಕ್ಷಣವೇ ಬಂಧಿಸಿ ಸೆರೆಮನೆಗೆ ಕಳುಹಿಸಲಾಗಿದೆ. ಉಳಿದ 27 ಮಂದಿಯ ಬಂಧನಕ್ಕಾಗಿ ವಾರಂಟ್ ಜಾರಿಗೊಳಿಸಲಾಗಿದೆ.

1991 ಜುಲೈ 12ರಂದು ಉತ್ತರ ಪ್ರದೇಶದ ಬದೌನ್​ನಲ್ಲಿ ಲಕ್ಷುರಿ ಬಸ್ಸನ್ನು ತಡೆದು ನಿಲ್ಲಿಸಿದ್ದ ಪೊಲೀಸರು ಅದರಲ್ಲಿದ್ದ ಸಿಖ್ ಯಾತ್ರಿಕರನ್ನು ಕೆಳಗಿಳಿಸಿ ಬೇರೆ ಬೇರೆ ಠಾಣೆಗಳಿಗೆ ಒಯ್ದು ನಕಲಿ ಎನ್​ಕೌಂಟರ್​ನಲ್ಲಿ ಕೊಂದು ಹಾಕಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 57 ಮಂದಿ ಪೊಲೀಸರ ವಿರುದ್ಧ ಚಾಜ್​ಷೀಟ್ ಹಾಕಲಾಗಿತ್ತು. 25 ವರ್ಷಗಳಿಂದ ನಡೆಯುತ್ತಿದ್ದ ವಿಚಾರಣೆಯ ಅವಧಿಯಲ್ಲಿ 10 ಪೊಲೀಸರು ಸಾವನ್ನಪ್ಪಿದ್ದರು.

Write A Comment