ರಾಷ್ಟ್ರೀಯ

ಮಲ್ಯ ನೀಡುವುದಾಗಿ ಹೇಳಿದ ಹಣ ಸಾಲದ ಬಡ್ಡಿಗೂ ಸಾಲಲ್ಲ!

Pinterest LinkedIn Tumblr

07-vijay-mallya-webಮುಂಬೈ: ಕಂತಿನಲ್ಲಿ 6000 ಕೋಟಿ ರೂ.ಗಳನ್ನು ನೀಡುವುದಾಗಿ ಸುಸ್ತಿದಾರ ವಿಜಯ್ ಮಲ್ಯ ಹೇಳಿದ್ದರೂ, ಸಾಲ ನೀಡಿರುವ ಬ್ಯಾಂಕ್ ಇದನ್ನು ತಿರಸ್ಕರಿಸಲು ಮುಂದಾಗಿದೆ. 9000 ಸಾವಿರ ಕೋಟಿ ರೂ.ನಷ್ಟು ಬಾಕಿ ಉಳಿಸಿಕೊಂಡ ಅವರಿಗೆ ಈ ವಿನಾಯಿತಿ ನೀಡಲು ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬರಲಾಗಿದೆ ಎಂದು ಇಬ್ಬರು ಬ್ಯಾಂಕರ್​ಗಳು ದೃಢಪಡಿಸಿದ್ದಾರೆ.

ಆದರೆ ತನ್ನ ಈ ನಿರ್ಧಾರವನ್ನು ಈ ವರೆಗೂ ವಿಜಯ್ ಮಲ್ಯ ಅವರಿಗೆ ತಿಳಿಸಿಲ್ಲ. ಏಪ್ರಿಲ್ 7, ಗುರುವಾರ ಸುಪ್ರೀಂ ಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ಇರುವ ಕಾರಣ ಅಂದು ತಮ್ಮ ನಿರ್ಧಾರವನ್ನು ಮಲ್ಯ ಅವರ ಗಮನಕ್ಕೆ ತರುವ ಉದ್ದೇಶ ಬ್ಯಾಂಕ್​ಗಳದ್ದಾಗಿದೆ.

ಅಷ್ಟೇ ಅಲ್ಲ ಮಲ್ಯ ನೀಡುವುದಾಗಿ ಹೇಳಿರುವ 4000 ಕೋಟಿ ರೂ. ಸಾಲದ ಮೇಲಿನ ಬಡ್ಡಿಗೂ ಸಾಲದು ಎಂದು ಬ್ಯಾಂಕ್​ಗಳು ಹೇಳಿಕೊಳ್ಳುತ್ತಿವೆ. ಸಪ್ಟೆಂಬರ್ ಮೊದಲ ವಾರದಲ್ಲಿ ನೀಡುವುದಾಗಿ ಹೇಳಿರುವ ಹಣವನ್ನು ದುಪ್ಪಟ್ಟುಗೊಳಿಸಿ ನೀಡುವುದಾದಲ್ಲಿ ಅಭ್ಯಂತರವಿಲ್ಲ ಎನ್ನುವ ನಿರ್ಧಾರಕ್ಕೆ ಬ್ಯಾಂಕ್​ಗಳು ಬಂದಿವೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಮಲ್ಯ ಯೋಜನೆ ಏರುಪೇರಾಗುವ ಎಲ್ಲಾ ಸಾಧ್ಯತೆಗಳಿದ್ದು, ಸುಪ್ರೀಂ ಕೋರ್ಟ್ ವಿಚಾರಣೆಯ ವೇಳೆ ಏನೆಲ್ಲಾ ಆಗಲಿವೆ ಎನ್ನುವ ಕುತೂಹಲ ಈಗ ಇನ್ನಷ್ಟು ಹೆಚ್ಚಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬ್ಯಾಂಕ್​ಗಳು ಸಭೆ ಸೇರಿದ್ದವು.

Write A Comment