ಮನೋರಂಜನೆ

ವೈರಲ್ ಆಯ್ತು ಧೋನಿ ಪುತ್ರಿ ಜೊತೆ ಕೊಹ್ಲಿ ಸೆಲ್ಫಿ

Pinterest LinkedIn Tumblr

kohli-selfie

ಮುಂಬೈ: ಕ್ರಿಕೆಟ್ ಸ್ಟಾರ್ ವಿರಾಟ್ ಕೊಹ್ಲಿ, ಟೀಂ ಇಂಡಿಯಾ ಧೋನಿ ಪುತ್ರಿ ಝಿವಾ ಜೊತೆ ತೆಗೆದಿರುವ ಸೆಲ್ಫಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೊಹ್ಲಿ ಹಾಗೂ ಧೋನಿ ಪುತ್ರಿಯ ಸೆಲ್ಫಿಗೆ ಲಕ್ಷಾಂತರ ಲೈಕ್ ಹಾಗೂ ಸಾವಿರಾರು ಕಮೆಂಟ್‍ಗಳು ಬಿದ್ದಿವೆ.

ಧೋನಿ ಪುತ್ರಿಯ ಸೆಲ್ಫಿ ಫೋಟೋವನ್ನ ಪೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿರುವ ಕೊಹ್ಲಿ, ಝಿವಾ ಮುದ್ದಾಗಿದ್ದಾಳೆ ಹಾಗೂ ಆಕರ್ಷಕವಾಗಿದ್ದಾಳೆ ಎಂದು ಟೈಪ್ ಮಾಡಿ ಪೋಸ್ಟ್ ಹಾಕಿದ್ದಾರೆ. ಚಿತ್ರದಲ್ಲಿ ಕೊಹ್ಲಿ ಸೆಲ್ಫಿ ಸ್ಮೈಲ್ ಕೊಟ್ರೆ, ಧೋನಿ ಪುತ್ರಿ ಫೋನ್‍ನ್ನ ಕಿವಿಗೆ ಹಿಡ್ಕೊಂಡಿದ್ದಳು.

ಮಂಗಳವಾರ ರಾತ್ರಿ ಅಪ್‍ಲೋಡ್ ಮಾಡಿರುವ ಫೋಟೋವನ್ನು 26 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದರೆ, 18 ಸಾವಿರಕ್ಕೂ ಅಧಿಕ ಮಂದಿ ಕಮೆಂಟ್ ಮಾಡಿದ್ದಾರೆ.

Write A Comment