ರಾಷ್ಟ್ರೀಯ

ಈ ಗ್ರಾಮದ ಯುವಕರಿಗಿಲ್ಲ ಕಂಕಣ ಭಾಗ್ಯ!

Pinterest LinkedIn Tumblr

marerage

ಛತ್ತರ್‍ಪುರ್: ಮಳೆಯಿಲ್ಲದೇ ನೀರಿಗೆ ಬರಗಾಲ ಬಂದಿದೆ. ಜಾನುವಾರುಗಳು ಸೇರಿದಂತೆ ಜನ ಕೂಡ ತತ್ತರಿಸಿದ್ದಾರೆ. ಇದೀಗ ಬರಗಾಲ ಸಮಸ್ಯೆ ಗ್ರಾಮವೊಂದರ ಯುವಕರಿಗೆ ಬರಸಿಡಿಲಿನಂತೆ ಎರಗಿದ್ದು, ಅವರ ಮದುವೆಗೆ ಬ್ರೇಕ್ ಹಾಕಿದೆ.

ಹೌದು. ಮಧ್ಯಪ್ರದೇಶದ ಛತ್ತರಪುರ್‍ನ ತೆರಿಯಾಮರ್ ಗ್ರಾಮದಲ್ಲಿ ನೀರಿಗೆ ಅಹಾಕಾರ ಉಂಟಾಗಿದೆ. ಇದೇ ಕಾರಣಕ್ಕೆ ಇದೀಗ ಈ ಗ್ರಾಮದ ಯುವಕರಿಗೆ ಮದುವೆಯಾಗಲು ಯಾವೊಬ್ಬ ಯುವತಿಯರು ಒಪ್ಪುತ್ತಿಲ್ಲವಂತೆ. ಹೀಗಾಗಿ ನೀರಿನ ಸಮಸ್ಯೆ ಬಗೆ ಹರಿಸುವಂತೆ ಈ ಗ್ರಾಮದ ಯುವಕರು ಸರ್ಕಾರದ ಮೊರೆ ಹೋಗಿದ್ದಾರೆ.

ಛತ್ತರಪುರ್ ಜಿಲ್ಲೆ ಸತತ ಮೂರನೇ ಬಾರಿಗೆ ನೀರಿಲ್ಲದೇ ಬರಗಾಲ ಎದುರಿಸುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಗ್ರಾಮದ ಯುವಕರಿಗೆ ಕಂಕಣ ಭಾಗ್ಯಕ್ಕೆ ಕಂಟಕ ಬಂದಿದೆ. ಇಲ್ಲಿಯ ಗ್ರಾಮಸ್ಥರು ನೀರಿಗಾಗಿ ಕಡಿಮೆಯೆಂದಾದರೂ ಕಿಮೀಗಟ್ಟಲೇ ದೂರ ಕ್ರಮಿಸಬೇಕಾಗಿದೆ. ನೀರಿನ ಸಮಸ್ಯೆ ಬಗೆಹರಿಸಲು ಕಿರು ಡ್ಯಾಮ್ ನಿರ್ಮಿಸಿ ಎಂದು ಜನ ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ.

Write A Comment