ರಾಷ್ಟ್ರೀಯ

ನನ್ನನ್ನು ತೆಗಳಿ ಆದ್ರೆ ಮಗನನ್ನು ಟಾರ್ಗೆಟ್ ಮಾಡ್ಬೇಡಿ: ಮಲ್ಯ

Pinterest LinkedIn Tumblr

vijay-siddharth-mallya

ನವದೆಹಲಿ: ನನ್ನ ಮಗ ಸಿದ್ಧರ್ಥ್‍ಗೂ ನನ್ನ ವ್ಯವಹಾರಗಳಿಗೂ ಯಾವುದೇ ಸಂಬಂಧವಿಲ್ಲ. ನನ್ನನ್ನು ಎಷ್ಟು ಬೇಕಾದರೂ ನಿಂದಿಸಿ ಆದರೆ ವಿನಾಕಾರಣ ನನ್ನ ಮಗನನ್ನು ಈ ವಿಷಯದಲ್ಲಿ ಎಳೆಯಬೇಡಿ ಅಂತ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ.

ನಾನು ತಲೆಮರೆಸಿಕೊಂಡಿಲ್ಲ ನನ್ನನ್ನು ಹುಡುಕುವ ವ್ಯರ್ಥ ಪ್ರಯತ್ನ ಬೇಡ ಎಂದು ಈ ಹಿಂದೆ ಟ್ವೀಟ್ ಮಾಡಿದ್ದ ಮದ್ಯ ದೊರೆ ವಿಜಯ್ ಮಲ್ಯ ಇದೀಗ ತಮ್ಮ ಮಗ ಸಿದ್ದಾರ್ಥ್‍ಗೆ ರಕ್ಷಣೆಯಾಗಿ ನಿಂತಿದ್ದಾರೆ.

ಸಾಲ ವಸೂಲಾತಿಗಾಗಿ ಎಸ್‍ಬಿಐನ ದೂರಿನ ಮೇರೆಗೆ ಇಡಿ ಯಿಂದ ಸಮನ್ಸ್ ಜಾರಿಯಾದ ನಂತರ ಮಾರ್ಚ್ 2 ರಂದು ಮಲ್ಯ ವಿದೇಶಕ್ಕೆ ಹಾರಿದ್ದರು. ಅನಂತರ ಮಲ್ಯ ಅವರ ಮಗ ಸಿದ್ಧಾರ್ಥ್ ವಿರುದ್ಧ ಟ್ವಿಟ್ಟರಿಗರು ತಿರುಗಿಬಿದ್ದಿದ್ದರು.

Write A Comment