ರಾಷ್ಟ್ರೀಯ

ಭಾರತ ಮಾತೆಗೆ ಜಯಘೋಷ, ಜನರನ್ನು ಒತ್ತಾಯಿಸುವುದು ಬೇಡ

Pinterest LinkedIn Tumblr

28-mohan-bhagawath-webಲಖನೌ: ‘ಭಾರತ್ ಮಾತಾ ಕಿ ಜಯ್’ ಘೋಷಣೆ ಕೂಗುವಂತೆ ಜನರನ್ನುಒತ್ತಾಯಿಸುವುದರಿಂದ ದೂರವಿರಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಸೋಮವಾರ ತಮ್ಮ ಸಂಘಟನೆಯ ಸದಸ್ಯರಿಗೆ ಸೂಚಿಸಿದರು.

‘ಜನತೆ ತಾವಾಗಿಯೇ ಘೋಷಣೆ ಕೂಗುವಂತೆ ನಮ್ಮ ವರ್ತನೆ ಇರಬೇಕು. ಘೋಷಣೆ ಕೂಗುವ ಆಸಕ್ತಿ ಒಳಗಿನಿಂದಲೇ ಮೂಡಿಬರಬೇಕು’ ಎಂದು ಚಾರಿತ್ರಿಕ ಸ್ಮೃತಿಭವನವನ್ನು ಲಖನೌದಲ್ಲಿ ಜನತೆಗೆ ಅರ್ಪಿಸುತ್ತಾ ಭಾಗವತ್ ಹೇಳಿದರು. ಬಿಜೆಪಿಯ ಮೊದಲಿನ ಅವತಾರವಾದ ಜನಸಂಘವು 1951ರಲ್ಲಿ ಇದೇ ಕಟ್ಟಡದಲ್ಲಿ ಸ್ಥಾಪನೆಗೊಂಡಿತ್ತು.

‘ಸರ್ವ ಸಮಾಜ’ದ ಕಲ್ಪನೆ ಬಗ್ಗೆ ಮಾತನಾಡಿದ ಭಾಗವತ್, ರಾಷ್ಟ್ರೀಯ ಘೋಷಣೆಗಳನ್ನು ಉಚ್ಚರಿಸುವ ಪ್ರಕ್ರಿಯೆ ಸ್ವಯಂ ಇಚ್ಛೆಯದಾಗಬೇಕು, ಕಡ್ಡಾಯ ಕವಾಯತು ಅಲ್ಲ. ಪ್ರತಿಯೊಬ್ಬರೂ ನಮ್ಮವರೇ, ನಾವು ಎಲ್ಲರನ್ನೂ ಜೊತೆಗೆ ಒಯ್ಯಬೇಕು’ ಎಂದು ಹೇಳಿದರು.

ಕೋಲ್ಕತದಲ್ಲಿ ಭಾನುವಾರ ನೀಡಿದ್ದ ಹೇಳಿಕೆಯಲ್ಲಿ ಭಾಗವತ್ ಅವರು ಇಡೀ ವಿಶ್ವವೇ ಭಾರತ ಮಾತೆಗೆ ಜಯಘೋಷ ಹೇಳುವಂತೆ ಮಾಡುವುದು ಆರೆಸ್ಸೆಸ್​ನ ಗುರಿ ಎಂದು ತಿಳಿಸಿದ್ದರು. ಭಾರತದ ಗುಣಗಳ ಜೊತೆಗೆ ನಿಲ್ಲಲು ಬಯಸದ ವ್ಯಕ್ತಿಗಳಿಗಾಗಿ ಪ್ರತ್ಯೇಕ ರಾಷ್ಟ್ರವನ್ನೇ ರಚಿಸಲಾಗಿದೆ ಎಂದು ಅವರು ಹೇಳಿದ್ದರು.

Write A Comment