ರಾಷ್ಟ್ರೀಯ

ದಾಳಿ ನಡೆದ ಸ್ಥಳಕ್ಕಷ್ಟೇ ಪಾಕ್ ತನಿಖಾ ತಂಡಕ್ಕೆ ಪ್ರವೇಶ

Pinterest LinkedIn Tumblr

Manohar-Parikkarನವದೆಹಲಿ: ಪಂಜಾಬ್​ನ ಪಠಾಣ್​ಕೋಟ್ ವಾಯುನೆಲೆ ಮೇಲಿನ ದಾಳಿಗೆ ಸಂಬಂಧಿಸಿ ತನಿಖೆಗೆ ಆಗಮಿಸಿರುವ ಪಾಕಿಸ್ತಾನದ ಐವರು ಅಧಿಕಾರಿಗಳ ಜಂಟಿ ತನಿಖಾ ತಂಡಕ್ಕೆ ವಾಯು ನೆಲೆ ಪ್ರವೇಶಕ್ಕೆ ಅನುಮತಿ ಕೊಡುವುದಿಲ್ಲ ಎಂದು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಸ್ಪಷ್ಟಪಡಿಸಿದ್ದಾರೆ.

ಪಾಕ್ ಅಧಿಕಾರಿಗಳಿಗೆ ದಾಳಿ ನಡೆದ ಪ್ರದೇಶಕ್ಕಷ್ಟೇ ಪ್ರವೇಶದ ಅನುಮತಿ ನೀಡಲಾಗಿದೆ. ವಾಯುನೆಲೆಯ ಬೇರೆ ಯಾವ ಪ್ರದೇಶಕ್ಕೂ ಪಾಕ್ ಅಧಿಕಾರಿಗಳಿಗೆ ಪ್ರವೇಶವಿಲ್ಲ. ಈಗಾಗಲೇ ಆ ಪ್ರದೇಶದಲ್ಲಿ ರಾಷ್ಟ್ರೀಯ ತನಿಖಾ ದಳ ಬೇಲಿ ನಿರ್ವಿುಸಿದೆ ಎಂದು ಪರಿಕ್ಕರ್ ಸೋಮವಾರ ತಿಳಿಸಿದರು.

ಜೈಶ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್​ನ ಧ್ವನಿ ಮಾದರಿ ನೀಡುವಂತೆ ಪಾಕಿಸ್ತಾನಕ್ಕೆ ಬೇಡಿಕೆ ಇರಿಸಲು ಭಾರತ ಮುಂದಾಗಿದೆ. ಸೋಮವಾರ ಪಾಕಿಸ್ತಾನದ ಅಧಿಕಾರಿಗಳ ಜತೆ ತನಿಖೆಯ ಕುರಿತಾದ ಪ್ರಾಸ್ತವಿಕ ಮಾತುಕತೆ ನಡೆಸಲಾಯಿತು. ಪಾಕ್ ಅಧಿಕಾರಿಗಳು ಮಂಗಳವಾರ ಪಠಾಣ್​ಕೋಟ್ ವಾಯುನೆಲೆ ಮೇಲೆ ದಾಳಿ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

Write A Comment