ರಾಷ್ಟ್ರೀಯ

ಹಿಮಾಚಲ ಪ್ರದೇಶ, ಉತ್ತರಾಖಂಡ ಬಳಿಕ ಮಣಿಪುರದಲ್ಲಿ ಬಿಕ್ಕಟ್ಟಿನ ನೆರಳು

Pinterest LinkedIn Tumblr

manipur-webಇಂಫಾಲ್: ಹಿಮಾಚಲ ಪ್ರದೇಶ, ಉತ್ತರಾಖಂಡ ರಾಜಕೀಯ ಬಿಕ್ಕಟಿನ ಬೆನ್ನಲ್ಲೇ, ಮಣಿಪುರವೂ ಅದೇ ಹಾದಿಯಲ್ಲಿ ಸಾಗಿರುವ ಲಕ್ಷಣಗಳು ಕಂಡು ಬಂದಿದೆ.

ಮಣಿಪುರದ 25 ಕಾಂಗ್ರೆಸ್ ಶಾಸಕರು ಸಂಪುಟ ಪುನರ್​ರಚಿಸುವಂತೆ ಮಣಿಪುರದ ಮುಖ್ಯಮಂತ್ರಿ ಓಕ್ರಮ್ ಇಬೋಬಿ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ. ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಓಕ್ರಮ್ ಇಬೋಬಿ ಸಿಂಗ್​ಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.

2012ರಲ್ಲಿ 60 ಸದಸ್ಯ ಬಲದ ಮಣಿಪುರ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 42 ಸ್ಥಾನಗಳನ್ನು ಗೆದ್ದು ಬಹುಮತ ಗಳಿಸಿತ್ತು. ಮಣಿಪುರ ಸ್ಟೇಟ್ ಕಾಂಗ್ರೆಸ್ ಪಾರ್ಟಿ (ಎಂಎಸ್​ಸಿಪಿ)ಯ ಐವರ ಬೆಂಬಲದೊಂದಿಗೆ ಕಾಂಗ್ರೆಸ್​ಗೆ 47 ಸದಸ್ಯರ ಬಲ ಬಂದಿತ್ತು. ಓಕ್ರಮ್ ಇಬೋಬಿ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಮೂಲಗಳ ಪ್ರಕಾರ ತಮ್ಮ ಬೇಡಿಕೆಗಳನ್ನು ಅಂಗೀಕರಿಸದಿದ್ದರೆ ಬಿಜೆಪಿಗೆ ಸೇರುವ ಬಗ್ಗೆ 25 ಶಾಸಕರು ಸುಳಿವು ನೀಡಿದ್ದಾರೆ ಎಂದು ಹೇಳಲಾಗಿದೆ.

Write A Comment