ಮುಂಬೈ

ಹೊಗೆ, ಮುಂಬೈಯಲ್ಲಿ ದಿಢೀರ್ ಇಳಿದ ಏರ್ ಇಂಡಿಯಾ ವಿಮಾನ

Pinterest LinkedIn Tumblr

28-air-indi-webಮುಂಬೈ: ವಿಮಾನದ ಕೆಳಭಾಗದಲ್ಲಿ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೈದರಾಬಾದ್​ನಿಂದ ಬಂದ ಏರ್ ಇಂಡಿಯಾ ವಿಮಾನವನ್ನು ಸೋಮವಾರ ಇಲ್ಲಿ ತುರ್ತಾಗಿ ಕೆಳಗಿಳಿಸಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಎಐ-620 ವಿಮಾನದಲ್ಲಿ ಇದ್ದ ಎಲ್ಲಾ 120 ಮಂದಿ ಪ್ರಯಾಣಿಕರನ್ನೂ ಪ್ಯಾರಾಚ್ಯೂಟ್ ಒದಗಿಸುವ ಮೂಲಕ ತತ್ ಕ್ಷಣವೇ ವಿಮಾನದಿಂದ ಸುರಕ್ಷಿತವಾಗಿ ತೆರವು ಗೊಳಿಸಲಾಯಿತು.

ಸಂಬಂಧಪಟ್ಟ ಅಧಿಕಾರಿಗಳ ಸಮಯ ಪ್ರಜ್ಞೆಯ ಕ್ರಮಗಳು ಸಂಭಾವ್ಯ ದುರಂತವನ್ನು ತಪ್ಪಿಸಿದ್ದು, ವಿಮಾನವನ್ನು ಬಳಿಕ ದುರಸ್ತಿಗಾಗಿ ಕಳುಹಿಸಲಾಯಿತು ಎಂದು ಮೂಲಗಳು ಹೇಳಿವೆ. ಬೆಳಗ್ಗೆ 730ರ ಸುಮಾರಿಗೆ ವಿಮಾನವು ಇಳಿಯಲು ಸನ್ನದ್ಧವಾಗಿತ್ತು. ಅಷ್ಟರಲ್ಲಿ ಹೊಗೆ ಕಾಣಿಸಿಕೊಂಡದ್ದರಿಂದ ಮುಂಜಾಗರೂಕತಾ ಕ್ರಮವಾಗಿ ತುರ್ತಾಗಿ ಅದನ್ನು ಕೆಳಕ್ಕೆ ಇಳಿಸಲಾಯಿತು. ಹೊಗೆ ಕಾಣಿಸಿಕೊಳ್ಳಲು ಕಾರಣವೇನು ಎಂಬುದು ತತ್ ಕ್ಷಣಕ್ಕೆ ಗೊತ್ತಾಗಿಲ್ಲ. ಚಕ್ರ ಸ್ಪೋಟಗೊಂಡಿದೆ ಎಂಬ ವರದಿಗಳನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.

Write A Comment