ರಾಷ್ಟ್ರೀಯ

ಮುಸ್ಲಿಮ್ ವೈಯಕ್ತಿಕ ಕಾನೂನು, ಪ್ರತಿಕ್ರಿಯೆಗೆ ಸುಪ್ರೀಂ ನಿರ್ದೇಶನ

Pinterest LinkedIn Tumblr

28-supreme-court-webನವದೆಹಲಿ: ವಿವಾಹ, ವಿಚ್ಛೇದನ ಸೇರಿದಂತೆ ವಿವಿಧ ಅಂಶಗಳು ಸೇರಿದಂತೆ ಮುಸ್ಲಿಮ್ ವೈಯಕ್ತಿಕ ಕಾನೂನನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೋಮವಾರ ನಿರ್ದೇಶನ ನೀಡಿದೆ.

ವಿವಿಧ ವೈಯಕ್ತಿಕ ಕಾನೂನುಗಳ ಫಲಪ್ರದತೆ ಮತ್ತು ಇತರ ಅಂಶಗಳ ಬಗ್ಗೆ ಪರಿಶೀಲಿಸಲು ರಚಿಸಲಾಗಿರುವ ಸಮಿತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆಯೂ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಥಾಕುರ್, ನ್ಯಾಯಮೂರ್ತಿ ಯುಯು ಲಲಿತ್ ಅವರನ್ನು ಒಳಗೊಂಡ ಪೀಠವು ವಿಷಯವನ್ನು ಸ್ವಯಂಪ್ರೇರಿತ ಅರ್ಜಿಯಾಗಿ ಪರಿಗಣಿಸಿ ವಿಚಾರಣೆಗೆ ಎತ್ತಿಕೊಂಡಿದ್ದು, ಇದರ ಜೊತೆಗೇ ಶಯಾರಾ ಬಾನೊ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು ಪ್ರಕರಣವನ್ನು ಆಲಿಸಲಿದೆ.

ಮುಸ್ಲಿಮ್ ವೈಯಕ್ತಿಕ ಕಾನೂನಿನಲ್ಲಿನ ತಲಾಖ್-ಇ-ಬಿದತ್, ನಿಖಾ-ಹಲಾಲ ಮತ್ತು ಬಹುಪತ್ನಿತ್ವ ನಿಯಮಗಳು ಸಂವಿಧಾನದ 14, 15, 21 ಮತ್ತು 25ನೇ ವಿಧಿಗಳ ಅಡಿಯಲ್ಲಿ ಅಕ್ರಮ ಹಾಗೂ ಸಂವಿಧಾನ ವಿರೋಧಿ ಎಂಬುದಾಗಿ ಘೊಷಿಸಬೇಕು ಮತ್ತು ಮುಸ್ಲಿಮ್ ಮಹಿಳೆಯರಿಗೆ ತಾರತಮ್ಯ ರಹಿತ, ಗೌರವಾರ್ಹ ಬದುಕಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಆದೇಶ ನೀಡಬೇಕು ಎಂದು ಶಯಾರಾ ಬಾನೊ ತಮ್ಮ ‘ಮ್ಯಾಂಡಮಸ್’ ಅರ್ಜಿಯಲ್ಲಿ ಕೋರಿದ್ದಾರೆ.

Write A Comment