ರಾಷ್ಟ್ರೀಯ

ಮೋದಿ ಪಾಕ್ ಗೆ ಶರಣು- ಕೇಜ್ರಿ ಟೀಕೆ

Pinterest LinkedIn Tumblr

kejriwal-e1458116140431ದೆಹಲಿ: ಪಠಾಣ್ ಕೋಟ್ ನ ವಾಯುನೆಲೆಯ ಮೇಲೆ ನಡೆದ ದಾಳಿಯ ತನಿಖೆ ನಡೆಸಲು, ಪಾಕಿಸ್ತಾನದ ತನಿಖಾದಳಕ್ಕೆ ಅವಕಾಶ ನೀಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸಿಎಂ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ.

ಪಾಕ್ ತನಿಖಾ ತಂಡವನ್ನು ಭಾರತಕ್ಕೆ ಕರೆಸಿಕೊಳ್ಳುವ ಮೂಲಕ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಶರಣಾಗಿದ್ದಾರೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನ ಭಾರತದ ವಿರುದ್ಧದ ಭಯೋತ್ಪಾದಕರಿಗೆ ನೆಲೆ ನೀಡಿದೆ ಮತ್ತು ಈಗ ಅವರೇ ಪ್ರಾಯೋಜಿಸಿರುವ ಭಯೋತ್ಪಾದನೆಯನ್ನು ತನಿಖೆ ಮಾಡಲು ಪಾಕಿಸ್ತಾನದ ಭದ್ರತಾ ಮತ್ತು ಬೇಹುಗಾರಿಕಾ ದಳಕ್ಕೆ ಅವಕಾಶ ಕೊಟ್ಟಿರುವುದು ಹೇಗೆ ಎಂದು ಕೇಜ್ರಿವಾಲ್ ಮಾಧ್ಯಮಗಳ ಮುಂದೆ ಪ್ರಶ್ನಿಸಿದ್ದಾರೆ.

ಜನವರಿ 2 ರಂದು ನಡೆದ ದಾಳಿಯ ತನಿಖೆ ನಡೆಸಲು ಪಾಕಿಸ್ತಾನ ತಂಡ ಭಾರತಕ್ಕೆ ಬಂದಿಳಿದಿದೆ. ಈ ದಾಳಿಯಲ್ಲಿ ಭಾರತದ ಏಳು ಭದ್ರತಾ ಸಿಬ್ಬಂದಿ ಮತ್ತು ದಾಳಿ ಮಾಡಿದ ಭಯೋತ್ಪಾದಕರು ಮೃತರಾಗಿದ್ದರು.

Write A Comment