ಮನೋರಂಜನೆ

ತೆಲುಗಿನ ಖಾಸಗಿ ವಾಹಿನಿ ನಿರೂಪಕಿ ನಿರೊಶಾ ಆತ್ಮಹತ್ಯೆ

Pinterest LinkedIn Tumblr

nirosha

ಹೈದರಾಬಾದ್: ತೆಲುಗಿನ ಖ್ಯಾತ ವಾಹಿನಿಯೊಂದರ ಟಿವಿ ನಿರೂಪಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಕಂದರಾಬಾದ್‍ನಲ್ಲಿ ನಡೆದಿದೆ.

23 ವರ್ಷದ ನಿರೊಶಾ ಆತ್ಮಹತ್ಯೆ ಮಾಡಿಕೊಂಡ ನಿರೂಪಕಿ. ಸಿಕಂದರಾಬಾದ್‍ನಲ್ಲಿ ನೆಲೆಸಿದ್ದ ಪಿಜಿಯಲ್ಲಿ ಅವರು ನೇಣು ಬಿಗಿದುಕೊಂಡು ಇಂದು ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತೆಲುಗಿನ ಮ್ಯೂಸಿಕ್ ವಾಹಿನಿಯಲ್ಲಿ ನಿರೂಪಕಿಯಾಗಿದ್ದ ಇವರು ತೆಲುಗು ನ್ಯೂಸ್‍ನಲ್ಲೂ ರಿಪೋರ್ಟರ್ ಆಗಿಯೂ ಕೂಡ ಕೆಲಸಮಾಡಿದ್ದರು. ಪೊಲೀಸ್ ಮೂಲಗಳ ಪ್ರಕಾರ ನಿರೊಶಾ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಫೋನ್ ಕರೆಯೊಂದನ್ನು ಮಾಡಿದ್ದರು ಎಂದು ತಿಳಿದುಬಂದಿದೆ. ಸದ್ಯ ಈ ಫೋನ್ ಕರೆ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದು, ರಾಮಗೋಪಾಲ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment