ರಾಷ್ಟ್ರೀಯ

ನೇಮಕಾತಿ ಹಗರಣ: ಕೋರ್ಟ್‌ಗೆ ದಿಗ್ವಿಜಯ್ ಹಾಜರು

Pinterest LinkedIn Tumblr

Digvijayಭೋಪಾಲ್ (ಪಿಟಿಐ): ಮಧ್ಯಪ್ರದೇಶ ಸಚಿವಾಲಯ ಸಿಬ್ಬಂದಿ ನೇಮಕಾತಿ ಹಗರಣ ಸಂಬಂಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ಶನಿವಾರ ನ್ಯಾಯಾಲಯಕ್ಕೆ ಹಾಜರಾದರು.

ಬೆಳಿಗ್ಗೆ ಸುಮಾರು 11;30ರ ವೇಳೆಗೆ ಸಿಂಗ್ ಅವರು ಇಲ್ಲಿನ ಜಿಲ್ಲಾ ಹಾಗೂ ಸೆಷೆನ್ಸ್ ನ್ಯಾಯಲಯದ ವಿಶೇಷ ನ್ಯಾಯಾಧೀಶ ಕಾಶೀನಾಥ್ ಸಿಂಗ್ ಅವರ ಎದುರು ಹಾಜರಾದರು.

1993ರಿಂದ 2003ರ ಅವಧಿಯಲ್ಲಿ ಸಿಂಗ್ ಅವರು ಮಧ್ಯಪ್ರದೇಶ ಮುಖ್ಯಮಂತ್ರಿ ಆಗಿದ್ದರು. ಆಗ ನಡೆದ ಹಗರಣ ಸಂಬಂಧ 169 ಪುಟಗಳ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಹಲವು ಬಾರಿ ಸಮನ್ಸ್‌ ನೀಡದ ಹೊರತಾಗಿಯೂ ಸಿಂಗ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಇದರಿಂದ ಕೆರಳಿದ್ದ ನ್ಯಾಯಾಲಯ ಸಿಂಗ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿತ್ತು.

ಮಧ್ಯಪ್ರದೇಶ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅರುಣ್ ಯಾದವ್, ಕೇಂದ್ರದ ಮಾಜಿ ಸಚಿವ ಸುರೇಶ್ ಪಚೌರಿ ಹಾಗೂ ತಮ್ಮ ವಕೀಲ ವಿವೇಕ್ ತನ್ಖಾ ಅವರು ಸಿಂಗ್ ಅವರ ಜತೆಗಿದ್ದರು.

ಶುಕ್ರವಾರ ಹಾಜರಾಗಿದ್ದ ಪ್ರಕರಣದ ಇತರ ಏಳು ಆರೋಪಿಗಳಿಗೆ ನ್ಯಾಯಾಲಯ ತಲಾ 30 ಸಾವಿರ ರೂಪಾಯಿ ಮೊತ್ತ ವೈಯಕ್ತಿಕ ಭದ್ರತಾ ಬಾಂಡ್‌ ಆಧಾರದಲ್ಲಿ ಜಾಮೀನು ನೀಡಿತ್ತು.

Write A Comment