ರಾಷ್ಟ್ರೀಯ

8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ವಿಷಯವನ್ನು ಯಾರಿಗೂ ಹೇಳದಂತೆ ರು.2 ಬಿಸಾಡಿ ಹೋದ ಪಾಪಿ!

Pinterest LinkedIn Tumblr

rape

ಬರೇಲಿ: 8 ವರ್ಷದ ಅಪ್ರಾಪ್ತ ಬಾಲಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿದ ಪಾಪಿಯೊಬ್ಬ ವಿಷಯವನ್ನು ಯಾರಿಗೂ ಹೇಳದಂತೆ ರು.2 ಕೊಟ್ಟು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಪ್ರದೇಶದಲ್ಲಿ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಶಾಲೆಗೆ ಹೋಗಿದ್ದ ಬಾಲಕಿಗೆ ಹಣದ ಆಮಿಷವೊಡ್ಡದ್ದ ಆರೋಪಿ, ಸಮೀಪದಲ್ಲಿದ್ದ ನಿರ್ಜನಪ್ರದೇಶಕ್ಕೆ ಕರೆದೊಯ್ದಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ನಂತರ ಸ್ಥಳದಲ್ಲಿ ಮತ್ತೊಂದು ಬಾಲಿಕಿಯನ್ನು ನೋಡಿ ಇಬ್ಬರಿಗೂ ರು.2 ಕೊಟ್ಟು ವಿಷಯವನ್ನು ಯಾರೊಂದಿಗೂ ಹೇಳದಂತೆ ಬೆದರಿಕೆ ಹಾಕಿ, ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಮೂಲಗಳ ಪ್ರಕಾರ ಇಬ್ಬರು ಬಾಲಕಿಯರು ಮಂಗಳವಾರ ಮಧ್ಯಾಹ್ನ 12ರ ಸುಮಾರಿಗೆ ಶಾಲೆಗೆ ಹೋಗಿದ್ದಾರೆ. ಈ ವೇಳೆ ದಾರಿಯಲ್ಲಿ ಬಂದಿದ್ದ ಆರೋಪಿ ಇಬ್ಬರಿಗೂ ಹಣದ ಆಮಿಷವೊಡ್ಡಿ ಕಾಡೊಂದಕ್ಕೆ ಕರೆದೊಯ್ದು ಓರ್ವ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾರೆ. ಇಲ್ಲದೆ ಇನ್ನೊಬ್ಬ ಬಾಲಕಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆಂದು ಹೇಳಲಾಗುತ್ತಿದೆ.

ಬಾಲಕಿಯನ್ನು ಮನೆಗೆ ಬರುವಾಗ ಗಾಯಗಳಾಗಿ, ರಕ್ತಸ್ರಾವಾಗುತ್ತಿರುವುದು ಕಂಡು ಬಂದಿತ್ತು. ಕೂಡಲೇ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ವೇಳೆ ಬಾಲಕಿ ಮೇಲೆ ಅತ್ಯಾಚಾರವಾಗಿರುವುದು ಬಹಿರಂಗವಾಗಿದ್ದು, ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಸ್ತುತ ಅತ್ಯಾಚಾರಕ್ಕೊಳಗಾದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಆರೋಪಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Write A Comment