ರಾಷ್ಟ್ರೀಯ

ಮತ್ತೊಬ್ಬ ಐಎಸ್ ಶಂಕಿತ ಉಗ್ರ ಬಂಧನ, 10 ದಿನ ಎನ್‌ಐಎ ವಶಕ್ಕೆ

Pinterest LinkedIn Tumblr

NIAನವದೆಹಲಿ (ಪಿಟಿಐ): ರಾಷ್ಟ್ರೀಯ ತನಿಖಾ ದಳ(ಎನ್ಐಎ) ಬಂಧಿಸಿದ್ದ ಐಸ್ಲಾಮಿಕ್ ಸ್ಟೇಟ್(ಐಎಸ್‌) ಉಗ್ರ ಸಂಘಟನೆ ಕುರಿತು ಸಹಾನೂಭೂತಿ ಹೊಂದಿದ್ದ ಅಬ್ದುಸ್ ಸಮಿ ಕಾಸ್ಮಿಯನ್ನು ಸ್ಥಳೀಯ ನ್ಯಾಯಾಲಯವು 10 ದಿನಗಳ ಕಾಲ ಎನ್‌ಐಎ ವಶಕ್ಕೆ ನೀಡಿದೆ.

ದೆಹಲಿಯ ಸೇಲಂಪುರ ನಿವಾಸಿಯಾದ ಅಬ್ದುಸ್ ಸಮಿ ಕಾಸ್ಮಿಯನ್ನು ಉತ್ತರ ಪ್ರದೇಶದ ಹರ್ದೊಯಿ ಜಿಲ್ಲೆಯಲ್ಲಿ ಶುಕ್ರವಾರ ಬಂಧಿಸಲಾಗಿತ್ತು.

ಐಎಸ್‌ ಸೇರ್ಪಡೆಗೆ ಯುವಕರನ್ನು ಪ್ರಚೋಸುತ್ತಿದ್ದ ಆರೋಪದಡಿ ಈತನನ್ನು ಉತ್ತರ ಪ್ರದೇಶ ಎಟಿಎಸ್‌ ಜತೆಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಎನ್‌ಐಎ ಬಂಧಿಸಿತ್ತು.

ಈತನನ್ನು ಜಿಲ್ಲಾ ನ್ಯಾಯಾಧೀಶ ಅಮರನಾಥ್ ಎದುರು ಹಾಜರುಪಡಿಸಲಾಗಿತ್ತು. ರಹಸ್ಯ ವಿಚಾರಣೆ ವೇಳೆ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಎನ್ಐಎ ಕೋರಿತು ಎಂದು ಮೂಲಗಳು ಹೇಳಿವೆ.

ಕಾಸ್ಮಿ ವಿರುದ್ಧ ಪ್ರಚೋದನಾಕಾರಿ ಹಾಗೂ ತ್ವೇಷಮಯ ಭಾಷಣಗಳನ್ನು ಮಾಡಿದ ಹಾಗೂ ದೇಶದ ಹಲವೆಡೆ ದಾಳಿ ನಡೆಸುವಂತೆ ಯುವಕರನ್ನು ಪ್ರೋತ್ಸಾಹಿಸಿದ ಆರೋಪವನ್ನು ಎನ್‌ಐಎ ಮಾಡಿದೆ ಎಂದು ಮೂಲಗಳು ಹೇಳಿವೆ.

Write A Comment