ರಾಮೇಶ್ವರ, ಜ.31-ಜಲಗಡಿ ಪ್ರವೇಶಿಸಿ ಮೀನುಗಾರಿಕೆ ನಡೆಸಿದ್ದಾರೆ ಎಂದು ಆರೋಪಿಸಿ ತಮಿಳುನಾಡಿನ 9ಮಂದಿ ಮೀನುಗಾರರನ್ನು ಬಂಧಿಸಿರುವ ಶ್ರೀಲಂಕಾ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ, ಇನ್ನೊಂದು ಗುಂಪಿನ ತಮಿಳುನಾಡು ಮೀನುಗಾರರ ಭಾರೀ ಬೆಲೆಯ 50ಬಲೆಗಳನ್ನು ನಾಶಪಡಿಸಿದ್ದಾರೆ.
ಶ್ರೀಲಂಕಾದ ಇರ್ರನ ತೀವ್ರ ಪ್ರದೇಶದಲ್ಲಿ ಮೀನು ಹಿಡಿಯುತ್ತಿದ್ದರೆಂದು, ಕೊಟ್ಟೈಪಟ್ಟಿನಂ ಮತ್ತು ಜೆಗದ ಪಟ್ಟನಂ (ತ.ನಾ) ಜಿಲ್ಲೆಗಳಿಗೆ ಸೇರಿದ 9ಮೀನುಗಾರರನ್ನು ಬಂಧಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡಿನ ಮತ್ತೊಂದು ತಂಡದ ಮೇಲೆ ದಾಳಿ ನಡೆಸಿ,
ನೌಕಾಪಡೆ ಯೋಧರು 50ಬಲೆಗಳನ್ನು ಹಾನಿಮಾಡಿ, 2ಮೀನುಗಾರಿಕೆ ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಮಿಳುನಾಡು ಮೀನುಗಾರಿಕೆ ಇಲಾಖೆಯ ಅಧಿಕಾರಿ ಗೋಪಿನಾಥ್ ಹೇಳಿದ್ದಾರೆ. ಲಂಕನ್ನರು ವಶಕ್ಕೆ: ಇದೇ ವೇಳೇ ವೀಸಾ ಅವದಿ ಮುಗಿದಿದ್ದರು ಇಲ್ಲಿಯೇ ನೆಲೆಸಿದ್ದ ಇಬ್ಬರು ಲಂಕೇಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.