ರಾಷ್ಟ್ರೀಯ

ನಿವೃತ್ತ ಸೇನಾ ದಂಡನಾಯಕ ಜನರಲ್ ಕೆ.ವಿ. ಕೃಷ್ಣರಾವ್ ಇನ್ನಿಲ್ಲ

Pinterest LinkedIn Tumblr

K-V-Krishna-Raoನವದೆಹಲಿ: 1971ರಲ್ಲಿ ನಡೆದ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಮುಖ್ಯ ಪಾತ್ರವಹಿಸಿದ್ದ ನಿವೃತ್ತ ಸೇನಾ ದಂಡನಾಯಕ ಜನರಲ್ ಕೆ.ವಿ.ಕೃಷ್ಣ ರಾವ್(92) ಅವರು ಶನಿವಾರ ಸೇನಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

14ನೇ ಸೇನಾ ದಂಡನಾಯಕರಾಗಿದ್ದ ರಾವ್, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ, ಪ್ರತ್ಯೇಕವಾದಿಗಳ ಚಟುವಟಿಕೆ ಹೆಚ್ಚಿದ್ದ ಸಂದರ್ಭದಲ್ಲಿ ರಾಜ್ಯಪಾಲರಾಗಿ ಪರಿಸ್ಥಿತಿ ಸುಧಾರಣೆಗಾಗಿ ಶ್ರಮಿಸಿದ್ದರು.

ಪರಮ ವಿಶಿಷ್ಟ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದ ರಾವ್, ಎರಡನೇ ವಿಶ್ವಯುದ್ಧದ ಸಂದರ್ಭ 1942ರಲ್ಲಿ ಬರ್ವ ಮತ್ತು ಬಲೂಚಿಸ್ತಾನ ಪರ ಹೋರಾಡಿದ್ದರು. ಪಂಜಾಬ್ ಗಲಭೆ ತೀವ್ರವಾಗಿದ್ದ ಸಂದರ್ಭದಲ್ಲಿ ಪೂರ್ವ ಮತ್ತು ಪಶ್ಚಿಮ ಪಂಜಾಬ್​ನಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 1947-48ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಪಾಲ್ಗೊಂಡಿದ್ದರು. 1949ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಸ್ಥಾಪಿಸಿದ್ದ ರಾವ್ 1951ರವರೆಗೆ ಅದರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಸೇನಾ ದಂಡನಾಯಕ ದಲ್ಬೀರ್ ಸಿಂಗ್ ಮತ್ತಿತರರು ರಾವ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Write A Comment