ಮನೋರಂಜನೆ

ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಟೀಂ ಇಂಡಿಯಾ ಕೈವಶ

Pinterest LinkedIn Tumblr

Team-India-Delhi_BCCI

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕೈವಶ ಮಾಡಿಕೊಂಡಿದೆ. ದೆಹಲಿಯ ಫಿರೋಜ್ ಷಾ ಕೊಟ್ಲಾ ಮೈದಾನದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 337 ರನ್ ಗಳ ಭಾರಿ ಮೊತ್ತದಿಂದ ಜಯ ಗಳಿಸಿದೆ.

ಡ್ರಾ ಮಾಡುವ ನಿಟ್ಟಿನಲ್ಲಿ ಆಫ್ರಿಕಾ ಆಟಗಾರರು ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ರವಿಚಂದ್ರನ್ ಅಶ್ವಿನ್ ಅವರ ಮಾರಣಾಂತಿಕ ದಾಳಿಗೆ ತತ್ತರಿಸಿದ ಆಟಗಾರರು ಪೆವಿಲಿಯನ್ ಪೆರೇಡ್ ನಡೆಸಿದರು.

ನಾಲ್ಕನೇ ದಿನದಾಟಕ್ಕೆ ಆಫ್ರಿಕಾ ತಂಡ 2 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿತ್ತು. ಇಂದು ಕಣಕ್ಕೀಳಿದ ಹಶೀಮ್ ಆಮ್ಲಾ ಮತ್ತು ನಾಯಕ ಎಬಿಡಿ ವಿಲಿಯರ್ಸ್ ಮತ್ತೆ ನಿಧಾನಗತಿಯ ಬ್ಯಾಟಿಂಗ್ ನಡೆಸಿದರು. ಅಶ್ವಿನ್ ಎಸೆತಕ್ಕೆ ವಿಲಿಯರ್ಸ್(43) ಔಟಾಗಿ ಪೆವಿಲಿಯನ್ ಸೇರಿದರೆ, ಆಲ್ಮಾ(25) ಜಡೇಜಾ ಬೌಲಿಂಗ್ ನಲ್ಲಿ ಔಲ್ಡ್ ಆದರು.

ನಂತರ ಬಂದ ಡುಪ್ಲೆಸಿಸ್ 10, ಜೆಪಿ ಡ್ಯುಮಿನಿ 0, ವಿಲಾಸ್ 13, ಅಬ್ಬೋಟ್ 0, ಡೇನ್ 1, ಮಾರ್ಕೇಲ್ 2 ರನ್ ಗಳಿಗೆ ಔಟಾದರು. ಭಾರತ ಪರ ಆರ್. ಅಶ್ವಿನ್ 5, ಜಡೇಜಾ 2, ಯಾದವ್ 3 ವಿಕೆಟ್ ಗಳಿಸಿದ್ದಾರೆ.

Write A Comment