ರಾಷ್ಟ್ರೀಯ

ಬಾಕಿ ಫೋನ್ ಬಿಲ್ ಪಾವತಿಸುವಂತೆ ಕಲಾಂಗೆ ನೋಟಿಸ್!

Pinterest LinkedIn Tumblr

Kalam____

ಹೊಸದಿಲ್ಲಿ, ಡಿ.4: ಬಾಕಿಯಿರುವ ಟೆಲಿಫೋನ್ ಬಿಲ್ಲನ್ನು ಪಾವತಿಸುವಂತೆ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಸೆನ್ನೆಲ್) ಮಾಜಿ ರಾಷ್ಟ್ರಪತಿ ದಿವಂಗತ ಎ.ಪಿ.ಜೆ. ಅಬ್ದುಲ್ ಕಲಾಂಗೆ ನೋಟಿಸ್ ಕಳುಹಿಸಿದ ವಿಲಕ್ಷಣ ಘಟನೆಯೊಂದು ವರದಿಯಗಿದೆ.

ತುಂಬಾ ಸಮಯದಿಂದ ಬಾಕಿಯಿರುವ 1,029 ರೂ. ಮೊತ್ತವನ್ನು ಒಂದೇ ಬಾರಿಗೆ ತೀರಿಸುವಂತೆ 2015 ನವೆಂಬರ್ 18ರ ನೋಟಿಸ್ ಕಲಾಂಗೆ ಸಲಹೆ ನೀಡಿದೆ. ಇಲ್ಲದಿದ್ದರೆ ಕಂದಾಯ ವಸೂಲಿ ಕ್ರಮವನ್ನು ಜಾರಿಗೊಳಿಸಲಾಗುತ್ತದೆ ಎಂದು ಎಚ್ಚರಿಸಿದೆ.

ಬಾಕಿ ಪಾವತಿಸಲು ವಿಫಲರಾದರೆ ಕಲಾಂರ ಸ್ಥಿರ ಮತ್ತು ಚರ ಆಸ್ತಿಯನ್ನು ಮುಟ್ಟುಗೋಲು ಹಾಕಲು ಕ್ರಮ ತೆಗೆದುಕೊಳ್ಳುವಂತೆ ಬಿಎಸ್ಸೆನ್ನೆಲ್ ತಿರುವನಂತಪುರಂ ವಲಯ ಕಂದಾಯ ವಸೂಲಿ ಅಧಿಕಾರಿಗೆ ಸೂಚಿಸಿದೆ.

ಕೇರಳ ರಾಜಭವನದಲ್ಲಿ ಕಲಾಂ ಎರಡು ದಿನಗಳ ಕಾಲ ಅತಿಥಿಯಾಗಿ ತಂಗಿದ್ದ ಅವಧಿಯ ಬಿಲ್ ಇದಾಗಿದೆ.

Write A Comment