ಅಂತರಾಷ್ಟ್ರೀಯ

ತೆರಿಗೆ ವಿನಾಯಿತಿಗಾಗಿ ಫೇಸ್​ಬುಕ್ ಷೇರು ದಾನ ಮಾಡಿಲ್ಲ: ಜುಕರ್​ಬರ್ಗ್

Pinterest LinkedIn Tumblr

Mark-Zuckerbergಸಾನ್ ಫ್ರಾನ್ಸಿಸ್ಕೊ: ಲಿಮಿಟೆಡ್ ಲೆಬಿಲಿಟಿ ಕಂಪನಿ(ಎಲ್ಎಲ್‌ಸಿ) ದತ್ತಿ ಸಂಸ್ಥೆಗೆ ಷೇರುಗಳನ್ನು ದಾನ ಮಾಡಿರುವ ಫೇಸ್​ಬುಕ್ ಸಂಸ್ಥಾಪಕ ಮಾರ್ಕ್ ಜುಕರ್​ಬರ್ಗ್ ತೆರಿಗೆ ವಿನಾಯಿತಿ ಪಡೆಯಲು ಮುಂದಾಗಿಲ್ಲ ಎಂದು ಹೇಳಿದ್ದಾರೆ.

ಫೇಸ್​ಬುಕ್​ನ ಶೇ. 99ರಷ್ಟು ಷೇರುಗಳನ್ನು ದತ್ತಿ ಸಂಸ್ಥೆಗೆ ದಾನ ಮಾಡುವ ಮೂಲಕ ತೆರಿಗೆ ವಿನಾಯಿತಿ ಪಡೆಯಲು ಮುಂದಾಗಿದ್ದಾರೆ ಎಂಬ ಆರೋಪವನ್ನು ಜುಕರ್​ಬರ್ಗ್ ಅಲ್ಲಗಳೆದಿದ್ದು, ದತ್ತಿ ಸಂಸ್ಥೆ ಸ್ಥಾಪಿಸುವ ಮೂಲಕ ನಾನು ಮತ್ತು ಪತ್ನಿ ಯಾವುದೇ ತೆರಿಗೆ ವಿನಾಯಿತಿ ಪಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜುಕರ್​ಬರ್ಗ್ ದಂಪತಿ ಪುತ್ರಿ ಮೆಕ್ಸಿಮಾ ಚಾನ್ ಜುಕರ್​ಬರ್ಗ್ ಹೆಸರಿನಲ್ಲಿ ಮಂಗಳವಾರ ದತ್ತಿ ಸಂಸ್ಥೆ ಸ್ಥಾಪಿಸಿದ್ದ ಅದಕ್ಕಾಗಿ ಸುಮಾರು 3 ಲಕ್ಷ ಕೋಟಿ ರು.(ಫೇಸ್​ಬುಕ್​ನ ಶೇ. 99ರಷ್ಟು ಷೇರುಗಳನ್ನು) ದಾನ ಮಾಡಿದ್ದರು.

Write A Comment