ರಾಷ್ಟ್ರೀಯ

ಸಿಎಂ ವಿರುದ್ಧ ಪ್ರತಿಭಟನೆ: ಹಾರ್ದಿಕ್ ಪಟೇಲ್ ತಾಯಿ, ಸಹೋದರಿಯ ಬಂಧನ

Pinterest LinkedIn Tumblr

patilಅಹ್ಮದಾಬಾದ್: ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಚುನಾವಣಾ ರ್ಯಾಲಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಪಟಿದಾರ್ ಅನಾಮತ್ ಅಂದೋಲನ್ ಸಮಿತಿ ಮುಖ್ಯಸ್ಥ ಹಾರ್ದಿಕ್ ಪಟೇಲ್ ಅವರ ತಾಯಿ ಮತ್ತು ಸಹೋದರಿಯನ್ನು ಪೊಲೀಸರು ಬಂದಿಸಿದ್ದಾರೆ.

ಮುಖ್ಯಮಂತ್ರಿ ಆನಂದಿ ಬೆನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಹಾರ್ದಿಕ್ ತಾಯಿ ಅವರ ಸಹೋದರಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.

ಉತ್ತರ ಮತ್ತು ಸೆಂಟ್ರಲ್ ಗುಜರಾತ್‌ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಆನಂದಿ‌ಬೆನ್ ಅವರಿಗೆ ತಮ್ಮದೇ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸುತ್ತಿರುವುದು ಇಕ್ಕಟ್ಟಿಗೆ ಸಿಲುಕಿಸಿದೆ. ಹಲವಾರು ನಗರಗಳಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿ ಪ್ರತಿಭಟನಾಕಾರರನ್ನು ಚದುರಿಸುತ್ತಿದ್ದಾರೆ.

ಜೈಲಿನಲ್ಲಿ ಬಂಧಿತರಾಗಿರುವ ಹಾರ್ದಿಕ್ ಪಟೇಲ್ ಹುಟ್ಟೂರಾದ ವೀರಮಗಮ್ ಪಟ್ಟಣದಲ್ಲಿ ಮುಖ್ಯಮಂತ್ರಿಯವರಿಗೆ ಪ್ರತಿಭಟನೆಕಾರರು ತೀವ್ರ ಪ್ರತಿಭಟನೆ ವ್ಯಕ್ತಪಡಿಸಬಹುದು ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್, ಸಾರ್ವಜನಿಕ ಸಭೆಗೆ ಆಗಮಿಸುತ್ತಿದ್ದಂತೆ ವಿವಿಧ ದಿಕ್ಕುಗಳಿಂದ ಬಂದ ಪಟೇಲ್ ಸಮುದಾಯದ ಸದಸ್ಯರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ಉದ್ರಿಕ್ತ ವಾತಾವರಣ ನಿರ್ಮಿಸಿದರು. ಜನರನ್ನು ಚದುರಿಸಿದ ಪೊಲೀಸರು, ಹಾರ್ದಿಕ್ ತಾಯಿ ಮತ್ತು ಅವರ ಸಹೋದರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Write A Comment