ರಾಷ್ಟ್ರೀಯ

ಗೋವುಗಳನ್ನು ಒದೆಯುತ್ತಿರುವ ವಿಎಚ್‌ಪಿ ಕಾರ್ಯಕರ್ತರ ವಿಡಿಯೋ ಬಹಿರಂಗ

Pinterest LinkedIn Tumblr

goಲಕ್ನೋ: ದಿವಂಗತ ವಿಎಚ್‌ಪಿ ಮುಖಂಡ ಅಶೋಕ್ ಸಿಂಘಾಲ್ ಅವರ ಪಿಂಡದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಎಚ್‌ಪಿ ಕಾರ್ಯಕರ್ತರು, ಗೋವುಗಳಿಗೆ ಒದೆಯುತ್ತಿರುವ ವಿಡಿಯೋ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ವೈರಲ್ ಆಗಿದೆ

ವಿಎಚ್‌ಪಿ ಕಾರ್ಯಕರ್ತರು ಯಾರೇ ಆಗಿರಲಿ ಇಂತಹ ಘಟನೆಯಲ್ಲಿ ಭಾಗಿಯಾಗಿದ್ದಲ್ಲಿ ಶಿಕ್ಷೆ ಖಚಿತ ಎಂದು ವಿಎಚ್‌ಪಿ ಮುಖಂಡರು ಎಚ್ಚರಿಸಿದ್ದಾರೆ.

ಒಂದು ವೇಳೆ, ವಿಎಚ್‌ಪಿ ಕಾರ್ಯಕರ್ತರು ಭಾಗಿಯಾಗಿದ್ದಲ್ಲಿ ಅವರನ್ನು ಗುರುತಿಸಿ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿಎಚ್‌ಪಿ ವಕ್ತಾರ ಶರದ್ ಶರ್ಮಾ ತಿಳಿಸಿದ್ದಾರೆ.

ಗೋಮಾತೆಯ ಬಗ್ಗೆ ನಮಗೆ ತುಂಬಾ ಗೌರವವಿದೆ. ಯಾವತ್ತೂ ಗೋವಿಗೆ ಅಗೌರವ ತೋರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವಿಶ್ವ ಹಿಂದೂ ಪರಿಷತ್ ನಿಲುವು ಸ್ಪಷ್ಟಪವಾಗಿದೆ ಎಂದು ಹೇಳಿದ್ದಾರೆ.

ದಿವಂಗತ ಅಶೋಕ್ ಸಿಂಘಾಲ್ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತೆರಳುತ್ತಿದ್ದ ವಿಎಚ್‌ಪಿ ಕಾರ್ಯಕರ್ತರು ದಾರಿಯಲ್ಲಿ ಬಂದ ಗೋವುಗಳಿಗೆ ಒದೆಯುತ್ತಿರುವುದು ವಿಡಿಯೋ ದೃಶ್ಯಗಳಲ್ಲಿ ದಾಖಲಾಗಿತ್ತು.

Write A Comment