ರಾಷ್ಟ್ರೀಯ

22 ಕೋಟಿ ರೂ.ಗಳೊಂದಿಗೆ ಪರಾರಿಯಾಗಿದ್ದ ವಾಹನ ಚಾಲಕನ ಬಂಧನ

Pinterest LinkedIn Tumblr

atmನವದೆಹಲಿ: 22 ಕೋಟಿ ರೂಪಾಯಿಗಳನ್ನು ಲಪಟಾಯಿಸಿಕೊಂಡು ಪರಾರಿಯಾಗಿದ್ದ ವಾಹನದ ಚಾಲಕನನ್ನು ಇಂದು ಪೊಲೀಸರು ಬಂಧಿಸಿ ಆರೋಪಿಯಿಂದ ಹಣವನ್ನು ವಶಪಡಿಸಿಕೊಂಡು ಕರ್ತವ್ಯನಿಷ್ಠೆ  ಮೆರೆದಿದ್ದಾರೆ.

ವಾಹನದ ಚಾಲಕನನ್ನು ಪ್ರದೀಪ್ ಕುಮಾರ್ ಎಂದು ಗುರುತಿಸಲಾಗಿದ್ದು, ಪ್ರಸ್ತುತ ಪೊಲೀಸರ ವಶದಲ್ಲಿದ್ದು ವಿಚಾರಣೆಯನ್ನು ಎದುರಿಸುತ್ತಿದ್ದಾನೆ.

ನಿನ್ನೆ ಗುರುವಾರದಂದು ಎಟಿಎಂನಲ್ಲಿ ಹಣ ತುಂಬಲು ಗಾರ್ಡ್ ಮತ್ತು ಕ್ಯಾಶಿಯರ್ ತೆರಳಿದ್ದಾಗ ವಾಹನದ ಚಾಲಕ ಪ್ರದೀಪ್ ಕುಮಾರ್ ವಾಹನದೊಂದಿಗೆ ಪರಾರಿಯಾಗಿದ್ದನು. ದೆಹಲಿ ನಗರಾದ್ಯಂತ ಪೊಲೀಸರು ಹೈ ಅಲರ್ಟ್ ಘೋಷಿಸಿ ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದರು. ತಡರಾತ್ರಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಹದ್ಯೋಗಿಗಳ ವೇತನ ಮತ್ತು ಕಾರ್ಯ ಅವಧಿಯ ಬಗ್ಗೆ ಚಾಲಕ ಪ್ರದೀಪ್ ಕುಮಾರ್ ಅಸಮಾಧಾನಗೊಂಡಿದ್ದನು ಎನ್ನಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ವಾಹನದಲ್ಲಿದ್ದ ಗನ್‌ಮ್ಯಾನ್ ಮೂತ್ರ ಮಾಡಬೇಕು ಎಂದು ಚಾಲಕ ಪ್ರದೀಪ್‌ಗೆ ತಿಳಿಸಿದಾಗ, ಪ್ರದೀಪ್ ಶೌಚಾಲಯದ ಬಳಿ ವಾಹನ ನಿಲ್ಲಿಸಿದ್ದಾನೆ. ಗನ್‌ಮ್ಯಾನ್ ಶೌಚಾಲಯಕ್ಕೆ ತೆರಳಿದ ಕೂಡಲೇ ಪ್ರದೀಪ್ ವಾಹನ ತೆಗೆದುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಚಾಲಕ ಪ್ರದೀಪ್ ಕುಮಾರ್ ಹಣದ ವಾಹನವನ್ನು ಓಖ್ಲಾ ತರಕಾರಿ ಮಾರುಕಟ್ಟೆ ವೇರ್ ಹೌಸ್ ಬಳಿ ತೆಗೆದುಕೊಂಡು ಗೋಡೌನ್‌ನಲ್ಲಿ ಹಣದ ಪೆಟ್ಟಿಗೆಗಳನ್ನು ಅಡಗಿಸಿಟ್ಟಿದ್ದಾನೆ. ಅದರಲ್ಲಿ ಕೇವಲ 11 ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ತನಗಾಗಿ ಬಟ್ಟೆಗಳನ್ನು ಖರೀದಿಸಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Write A Comment