ರಾಷ್ಟ್ರೀಯ

ನಕಲಿ ನೋಟು ಜಾಲ ಪತ್ತೆ; ನಾಲ್ವರ ಬಂಧನ

Pinterest LinkedIn Tumblr

22NOTESಹೈದರಾಬಾದ್ (ಪಿಟಿಐ): ನಕಲಿ ನೋಟು ಜಾಲ ಭೇದಿಸಿರುವ ಹೈದರಾಬಾದ್ ಪೊಲೀಸರು, ಬಾಂಗ್ಲಾದೇಶದ ಪ್ರಜೆ ಸೇರಿದಂತೆ ಬುಧವಾರ ನಾಲ್ವರನ್ನು ಬಂಧಿಸಿದ್ದಾರೆ.

ಅಲ್ಲದೇ, 3.81 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ‌ವಶಕ್ಕೆ ಪಡೆದಿದ್ದಾರೆ. ಬಂಧಿತ ನಾಲ್ವರೂ ಪಶ್ಚಿಮ ಬಂಗಾಳ ಮೂಲದ ವಿದ್ಯಾರ್ಥಿಗಳಾಗಿದ್ದಾರೆ.

ಬಂಧಿತ ಮೊಹಮ್ಮದ್ ಅಲ್ ಮಸ್ರೆಕಿನ್ ಅಲಿಯಾಸ್‌ ಸಾಥಿ (ಬಾಂಗ್ಲಾ ಪ್ರಜೆ),  ರಜಿಬುಲ್ ಹಕ್, ಆಸೀಫ್ ಇಕ್ಬಾಲ್ ಹಾಗೂ ಮಿನಾರುಲ್ ಇಸ್ಲಾಮ್ ಹೈದರಾಬಾದ್‌ನಲ್ಲಿ ನಕಲಿ ನೋಟು ವಿನಿಮಯದಲ್ಲಿ ತೊಡಗಿದ್ದರು ಎಂದು ಪ್ರಕಟಣೆಯಲ್ಲಿ ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಮೂಲದ ಸೋಫಿಕುಲ್‌ ಇಸ್ಲಾಮ್‌ ಹಾಗೂ ಶರೀಫ್‌ ನಕಲಿ ನೋಟು ಒದಗಿಸುತ್ತಾರೆ. ಅವರೇ ಈ ಜಾಲದ ಪ್ರಮುಖ ಆರೋಪಿಗಳಾಗಿದ್ದು, ಇಬ್ಬರೂ ತಲೆ ಮರೆಸಿಕೊಂಡಿದ್ದಾರೆ ಎಂದೂ ಪ್ರಕಟಣೆಯಲ್ಲಿ ಪೊಲೀಸರು ತಿಳಿಸಿದ್ದಾರೆ.

ಸಾಥಿ ಇನ್ನೂಳಿದ ಮೂವರನ್ನು ಗುಂಪು ಕಟ್ಟಿಕೊಂಡು ಭಾರತದಲ್ಲಿ ನಕಲಿ ನೋಟು ವಿನಿಮಯ ಮಾಡುತ್ತಿದ್ದರು ಎನ್ನಲಾಗಿದೆ. ಉನ್ನತ ವ್ಯಾಸಂಗಕ್ಕಾಗಿ 2009ರಲ್ಲಿ ಪ್ರವಾಸಿ ವೀಸಾ ಮೂಲಕ ಭಾರತ ಪ್ರವೇಶಿಸಿದ ಸಾಥಿ, ಪಶ್ಚಿಮ ಬಂಗಾಳದಲ್ಲಿ ತಂಗಿದ್ದ.  ಬಳಿಕ ಆತ ವಿದ್ಯಾರ್ಥಿ ವೀಸಾ ಪಡೆದಿದ್ದು, ಅದರ ಅವಧಿ 2016ರ ವರೆಗೂ ಇದೆ.

Write A Comment